ಕರಾವಳಿ

ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಯುವಕ;ಒಂದೇ ಚಕ್ರದ ಸೈಕಲ್‌ನಲ್ಲಿ 2300 ಕಿ.ಮೀ ಸವಾರಿ..!ಸದ್ಯದಲ್ಲೇ ವಿಶ್ವ ದಾಖಲೆ..!

ನ್ಯೂಸ್ ನಾಟೌಟ್‌ :ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವು ರೀತಿಯ ಕಾರ್ಯಕ್ರಮ ಸರಕಾರ ಸೇರಿದಂತೆ, ಸರಕಾರೇತರ ಸಂಸ್ಥೆಗಳು ನಿರಂತರವಾಗಿ ಮಾಡುತ್ತಿದೆ. ಸಮಾಜಕ್ಕೆ ಕಂಟಕವಾದ ಈ ಪಿಡುಗನ್ನು ತೊಲಗಿಸುವುದೇ ಇದರ ಮೂಲ ಉದ್ದೇಶವಾಗಿದೆ.ಇದೀಗ ಇಲ್ಲೊಬ್ಬ ಯುವಕ ವಿಭಿನ್ನ ರೀತಿಯಲ್ಲಿ ಜಾಗೃತಿ ಕಾರ್ಯದಲ್ಲಿ ತೊಡಗಿಕೊಳ್ಳಲು ಮುಂದಾಗಿದ್ದಾನೆ.ಹೌದು,ಒಂದು ಚಕ್ರದ ಸೈಕಲ್ ಮೂಲಕ ಡ್ರಗ್ಸ್‌ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾನೆ.

ಈ ಯುವಕರ ತಂಡ ಇದೀಗ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೇ ನೋ ಡ್ರಗ್ಸ್ ಎನ್ನುವ ಭಿತ್ತಪತ್ರದ ಹಿಡಿದು ಸೈಕಲ್ ಮೂಲಕ ದೇಶ ಪರ್ಯಟನೆ ಆರಂಭಿಸಿದೆ. ವಿಶೇಷವೆಂದರೆ ಮೂವರು ಯುವಕರಿರುವ ಈ ತಂಡದ ಓರ್ವ ಸದಸ್ಯ ಮಾತ್ರ ಒಂದೇ ಚಕ್ರವಿರುವ ಸೈಕಲ್ ನಲ್ಲಿ ಸಂಚರಿಸುತ್ತಿದ್ದು, ಜಾಗೃತಿಯ ಜೊತೆಗೆ ವಿಶ್ವ ದಾಖಲೆ ಮಾಡುವ ಹಂತದಲ್ಲಿದ್ದಾನೆ ಅನ್ನೋದು ವಿಶೇಷವೆನಿಸಿದೆ.

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಸವಿತ್, ತಾಹೀರ್ ಮತ್ತು ಪಾಲಕ್ಕಾಡ್ ಜಿಲ್ಲೆಯ ಅಭಿಷೇಕ್ ಈ ರೀತಿಯ ವಿಶೇಷ ಜಾಗೃತಿ ಅಭಿಯಾನವನ್ನು ಆರಂಭಿಸಿದ್ದು, ಈಗಾಗ್ಲೇ ಇವರ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕನ್ಯಾಕುಮಾರಿಯಿಂದ ಕಳೆದ ಎರಡು ತಿಂಗಳ ಹಿಂದೆ ಹೊರಟ ಇವರ ಸೈಕಲ್ ಯಾತ್ರೆ ಇದೀಗ ಮಂಗಳೂರು ತಲುಪಿದೆ. ಇನ್ನೂ ಆರು ತಿಂಗಳು ಸೈಕಲ್ ತುಳಿದು ಕಾಶ್ಮೀರವನ್ನು ತಲುಪುವ ಗುರಿ ಹೊಂದಿದ್ದಾರೆ.

ವಿಶೇಷವೆಂದ್ರೆ ಈ ಯುವಕರ ತಂಡದಲ್ಲಿರುವ ಸವಿತ್ ಅತ್ಯಂತ ತ್ರಾಸದಾಯಕವಾದ ಒಂದೇ ಚಕ್ರದ ಸೈಕಲ್‌ನಲ್ಲಿ ಸಂಚರಿಸುವ ಮೂಲಕ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದ್ದಾನೆ.ಸದ್ಯಕ್ಕೆ ಈ ಯುವಕ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಈ‌ ಯುವಕರು ಡ್ರಗ್ಸ್ ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯಾತ್ರೆ ‌ಕೈಗೊಂಡಿದ್ದಾರೆ‌.

ಕಳೆದ ಒಂದು ವರ್ಷದಿಂದ ಒಂದೇ ಚಕ್ರದಲ್ಲಿ ಸಂಚರಿಸಲು ನಿರಂತರವಾಗಿ ಪ್ರಯತ್ನಿಸಿದ್ದ ಸವಿತ್ ಇದೀಗ ಈ‌ ಸಾಹಸದಲ್ಲಿ ಯಶಸ್ವಿಯಾಗಿದ್ದು, ಇದೀಗ ಒಂದೇ ಟಯರ್ ಇರುವ ಸೈಕಲ್ ಮೂಲಕ ದೇಶ ಸುತ್ತುವ ಹಂತಕ್ಕೆ‌ ಬಂದಿದ್ದಾರೆ. ಕನ್ಯಾಕುಮಾರಿಯಿಂದ ಹೊರಡು ಕೇರಳದ ಎಲ್ಲಾ ಜಿಲ್ಲೆಗಳನ್ನು ದಾಟಿ‌ ಬಂದಿರುವ ಸವಿತ್ ಈಗಾಗಲೇ ಸುಮಾರು 2300 ಕಿಲೋಮೀಟರ್ ನಷ್ಟು ಸೈಕಲ್ ಸವಾರಿ ಮಾಡಿದ್ದಾರೆ.

ಸುಮಾರು 4,500 ಸಾವಿರ‌ ಕಿಲೋಮೀಟರ್ ದೂರದ‌ ಈ ಯಾತ್ರೆಯನ್ನು ನೇರ ಮಾರ್ಗದ ಮೂಲಕ ಕಾಶ್ಮೀರ ತಲುಪುವ ಪ್ಲಾನ್ ಕೂಡಾ ಹಾಕಿಕೊಂಡಿದ್ದಾರೆ. ಒಂದೇ ಚಕ್ರದಲ್ಲಿ ಇಷ್ಟು ದೂರ ಸಂಚರಿಸುವ ಪ್ರಯತ್ನವನ್ನು ಯಾರೂ ಈವರೆಗೂ ಮಾಡಿಲ್ಲ. ಓರ್ವ ವ್ಯಕ್ತಿ ಸುಮಾರು 500 ಕಿಲೋಮೀಟರ್ ಇದೇ ರೀತಿ ಸಂಚರಿಸಿದ್ದು, ಈ ವಿಚಾರದಲ್ಲಿ ವರ್ಲ್ಡ್ ರೆಕಾಡ್‌ ಕೂಡಾ ಆತನ ಹೆಸರಿನಲ್ಲಿದೆ. ಆದರೆ ಸವಿತ್ ಈಗಾಗಲೇ 2300 ಕಿಲೋಮೀಟರ್ ಒಂದೇ ಚಕ್ರದಲ್ಲಿ ಸಂಚರಿಸಿದ್ದು, ಈತ ಜಾಗೃತಿಯ ಜೊತೆಗೆ ವಿಶ್ವ ದಾಖಲೆಯಲ್ಲೂ ಈತನ ಸಾಧನೆ ದಾಖಲಾಗಲಿದೆ.

Related posts

ಒಂದೂವರೇ ತಿಂಗಳ ಮಗುವಿಗೆ ಅವಧಿ ಮೀರಿದ ಇಂಜೆಕ್ಷನ್ ಚುಚ್ಚಿದ ವೈದ್ಯ

ಸುಳ್ಯ: ಫುಟ್‌ಪಾತ್‌ನಲ್ಲಿ ಸಿಕ್ಕಿದ ಮೊಬೈಲನ್ನು ವಾರಿಸುದಾರರಿಗೆ ತಲುಪಿಸಿದ ಅಂಗಡಿ ಮಾಲೀಕ..!, ಯುವಕನ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ

ಸುಳ್ಯ: ಹಲವೆಡೆ ರಾರಾಜಿಸುತ್ತಿವೆ ಮತದಾನ ಬಹಿಷ್ಕಾರದ ಬ್ಯಾನರ್‌! ಏನಿದರ ಕಾರಣ?