ನ್ಯೂಸ್ ನಾಟೌಟ್: ಮಂಗಳೂರಿನ ಬಾವುಟಗುಡ್ಡೆಯಲ್ಲಿ ಏ.5ರಂದು ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪುಷ್ಪನಮನ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮಕ್ಕೆ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ , ಸಂಸದ ಬ್ರಿಜೇಶ್ ಚೌಟಾ, ಶಾಸಕ ವೇದವ್ಯಾಸ ಕಾಮತ್ , ವಿಧಾನ ಪರಿಷತ್ ಸದಸ್ಯ ಮಂಜನಾಥ ಭಂಡಾರಿ, ಮಾಜಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ,ಭರತ್ ಮುಂಡೋಡಿ, ಸದಾನಂದ ಮಾವಜಿ, ಪ್ರವೀಣ್ ಚಂದ್ರ ಆಳ್ವ, ಎಸಿ ವಿನಯ್ ರಾಜ್ ,ಕಿರಣ್ ಚಂದ್ರ ಪುಷ್ಪಗಿರಿ, ಡಾ. ಸಚಿನ್ ನಡ್ಕ ಹಾಗೂ ವಿವಿಧಸಂಘ ಸಂಸ್ಥೆಯ ಅಧ್ಯಕ್ಷರು, ರಾಷ್ಟ್ರಾಭಿಮಾನಿಗಳು ಭಾಗವಹಿಸಿದ್ದರು.
ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ ಸಂಸ್ಮರಣಾ ಕಾರ್ಯಕ್ರಮ ಹಾಗೂ ಚಿತ್ರಕಲಾ ಕಾರ್ಯಕ್ರಮ ಕೂಡ ನೆರವೇರಿತು.