ಕರಾವಳಿಕ್ರೈಂಮಂಗಳೂರು

ಮಂಗಳೂರು: 8 ಮಂದಿ ಸ್ನೇಹಿತರ ಜೊತೆ ಬಂದ ಯುವಕ ಸಮುದ್ರಪಾಲು..! ತನಿಖೆ ನಡೆಸುತ್ತಿರುವ ಸುರತ್ಕಲ್ ಪೊಲೀಸರು..!

ನ್ಯೂಸ್ ನಾಟೌಟ್ : ಸುರತ್ಕಲ್ ನ ಮುಕ್ಕ ರೆಡ್‌ ರಾಕ್ ಕಡಲ ಕಿನಾರೆಯ ನೀರಿನಲ್ಲಿ ಆಡುತ್ತಿದ್ದ ಯುವಕನೋರ್ವ ಸಮುದ್ರ ಪಾಲಾಗಿರುವ ಘಟನೆ ಮಂಗಳವಾರ(ಅ.23) ಸಂಜೆ ವರದಿಯಾಗಿದೆ‌.

ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಿವಾಸಿ ಪ್ರಜ್ವಲ್ (21) ನೀರು ಪಾಲಾದ ಯುವಕ ಎಂದು ಗುರುತಿಸಲಾಗಿದೆ.

ಪ್ರಜ್ವಲ್ ಸುಮಾರು 8 ಮಂದಿ ಸ್ನೇಹಿತರ ಜೊತೆ ಮುಕ್ಕ ರೆಡ್ ರಾಕ್ ಬಳಿಯ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ಪ್ರಜ್ವಲ್ ಸಮುದ್ರ ಪಾಲಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಯುವಕನ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2024/10/byelection-kannada-news-congress-opration-viral-news/

Related posts

ಅವಾಚ್ಯ ಶಬ್ದಗಳಿಂದ ಬಯ್ಯುತ್ತಿರುವ ಲಕ್ಮಣ, ಸಿಗರೇಟು ಸೇದುವ ಸೀತಾ ದೇವಿ..! ಏನಿದು ವಿಪರ್ಯಾಸ…? ಪ್ರೊಫೆಸರ್ ಸೇರಿ 5 ವಿದ್ಯಾರ್ಥಿಗಳ ಬಂಧನ

ಮಂಗಳೂರು: ಏನಿದು ಹನುಮ ಧ್ವಜ ಅಭಿಯಾನ..? ರಸ್ತೆ, ಮನೆ ಮನೆಯಲ್ಲಿ ಬಾವುಟ ಹಾರಿಸುತ್ತೇವೆ ಎಂದ ಶರಣ್ ಪಂಪವೆಲ್

6 ವರ್ಷದ ಬಾಲಕ ಹೃದಯಾಘಾತಕ್ಕೆ ಬಲಿ,ಒಂದನೇ ಕ್ಲಾಸ್‌ನಲ್ಲಿ ಓದುತ್ತಿದ್ದ ಮಗುವಿಗೆ ಆಗಿದ್ದೇನು?