ಕರಾವಳಿಕ್ರೈಂದಕ್ಷಿಣ ಕನ್ನಡಮಂಗಳೂರುವೈರಲ್ ನ್ಯೂಸ್

ಮಂಗಳೂರು: ಫುಟ್ಬಾಲ್ ಪಂದ್ಯದ ಜಗಳಕ್ಕೆ ವಿದ್ಯಾರ್ಥಿಗಳನ್ನು ಅಪಹರಿಸಿ, ಬಟ್ಟೆ ಬಿಚ್ಚಿಸಿ ಕ್ಷಮೆ ಕೇಳಿಸಿದ ಗ್ಯಾಂಗ್..! ಇಬ್ಬರನ್ನು ಬಂಧಿಸಿದ ಪೊಲೀಸರು..!

ನ್ಯೂಸ್ ನಾಟೌಟ್: ಮಂಗಳೂರಿನ ನೆಹರೂ ಮೈದಾನದಲ್ಲಿ ಇತ್ತೀಚೆಗೆ ಫುಟ್ಬಾಲ್ ಪಂದ್ಯದ ವೇಳೆ ಉಂಟಾದ ವಿವಾದಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ತಂಡವೊಂದು ಕೆಲವು ವಿದ್ಯಾರ್ಥಿಗಳನ್ನು ಅಪಹರಿಸಿ ಹಲ್ಲೆಗೈದಿರುವ ಘಟನೆ ಸೋಮವಾರ(ಆ.20) ರಾತ್ರಿ ನಡೆದಿರುವುದು ವರದಿಯಾಗಿದೆ.

ಮಂಗಳೂರಿನ ಎರಡು ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಈ ಘಟನೆ ನಡೆದಿದೆ. ದಿಯಾನ್, ತಸ್ಲೀಮ್, ಸಲ್ಮಾನ್ ಎಂಬವರ ಸಹಿತ ಅಪ್ರಾಪ್ತ ವಯಸ್ಸಿನ ಇನ್ನಿಬ್ಬರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಗರದ ಜಪ್ಪು ಮಹಾಕಾಳಿ ಪಡ್ಪು ಬಳಿ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಿ ಉಳಿದವರಿಗಾಗಿ ಶೋಧ ಮುಂದುವರಿಸಿದ್ದಾರೆ.

ನಗರದ ಎರಡು ಕಡೆ ಕರೆದೊಯ್ದು ವಿದ್ಯಾರ್ಥಿಗಳ ಬಟ್ಟೆಬಿಚ್ಚಿ, ಬಸ್ಕಿ ತೆಗೆಸಿ ಕ್ಷಮೆ ಕೇಳುವಂತೆ ಒತ್ತಾಯಿಸಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಗಾಯಾಳು ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Click

https://newsnotout.com/2024/08/puttur-wild-wild-boar-animal-kannada-news-scooter-driver/
https://newsnotout.com/2024/08/bengaluru-lady-case-under-twist-kannada-news-fir/
https://newsnotout.com/2024/08/duplicate-currency-note-kannada-news-youtube-puttur-mangaluru/

Related posts

ಪಾಕಿಸ್ತಾನದಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪ..! ನಡುಗಿದ ದೆಹಲಿ..!

ಸಂಗೀತ ಕಾರ್ಯಕ್ರಮ ನಡೆಸುತ್ತಿರುವಾಗ ವೇದಿಕೆಯಲ್ಲಿ ನೋವಿನಿಂದ ಒದ್ದಾಡಿದ ಖ್ಯಾತ ಗಾಯಕ..! ಸೋನು ನಿಗಮ್ ಆಸ್ಪತ್ರೆಗೆ ದಾಖಲು..!

ಪಂಜ: ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ವ್ಯಕ್ತಿ ಶವವಾಗಿ ಪತ್ತೆ,೪ ದಿನಗಳ ಬಳಿಕ ಬಾವಿಯಲ್ಲಿತ್ತು ಮೃತದೇಹ