Latestವೈರಲ್ ನ್ಯೂಸ್

ಮಂಗಳೂರು: 12ನೇ ಮಹಡಿಯಿಂದ ಬಿದ್ದು SSLC ವಿದ್ಯಾರ್ಥಿನಿ ಸಾವು..! ಬಟ್ಟೆ ಒಣ ಹಾಕುತ್ತಿದ್ದಾಗ ಘಟನೆ..!

855

ನ್ಯೂಸ್ ನಾಟೌಟ್ : ಅಪಾರ್ಟ್ಮೆಂಟ್‌ ನ 12ನೇ ಮಹಡಿಯಿಂದ ಬಿದ್ದು ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಕುತ್ತಾರಿನಲ್ಲಿ ನಿನ್ನೆ(ಜೂ.13) ನಡೆದಿದೆ.

ಕುತ್ತಾರು ನಿವಾಸಿ ಹಾಗೂ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯ ವೈದ್ಯ ಡಾ.ಮುಮ್ತಾಝ್ ಅಹಮ್ಮದ್ ದಂಪತಿಯ ಮಗಳು ಹಿಬಾ ಐಮನ್ (15) ಮೃತ ಯುವತಿ ಎಂದು ಗುರುತಿಸಲಾಗಿದೆ.

ಕುತ್ತಾರಿನಲ್ಲಿರುವ 18 ಮಹಡಿಯ ಸಿಲಿಕೋನಿಯಾ ಅಪಾರ್ಟ್ಮೆಂಟ್‌ ನ 12ನೇ ಮಹಡಿಯಿಂದ ಹಿಬಾ ಐಮನ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಮಹಡಿಯಲ್ಲಿ ಬಟ್ಟೆ ಒಣ ಹಾಕುತ್ತಿದ್ದಾಗ ಘಟನೆ ನಡೆದಿದೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ಹಿಬಾ ಐಮನ್‌ ಳ ತಂದೆ, ತಾಯಿ ಇಬ್ಬರೂ ದೇರಳಕಟ್ಟೆ ಯೇನಪೋಯ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಹೆತ್ತವರು ಕರ್ತವ್ಯಕ್ಕೆ ತೆರಳಿದ್ದಾಗ ಅಪಾರ್ಟ್ಮೆಂಟ್‌ ನಲ್ಲಿ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏರ್‌ ಇಂಡಿಯಾ ವಿಮಾನ ದುರಂತದ ಸಾವಿನ ಸಂಖ್ಯೆ 274ಕ್ಕೆ ಏರಿಕೆ..! ಮತ್ತಷ್ಟು ಹೆಚ್ಚಾಗುವ ಆತಂಕ..!

See also  ಗುರುಪ್ರಸಾದ್ ಸಾವಿನ ಬಗ್ಗೆ ನಟ ಜಗ್ಗೇಶ್ ನೀಡಿದ ಹೇಳಿಕೆ ವಿರುದ್ಧ ಗರಂ ಆದ ಲಾಯರ್ ಜಗದೀಶ್..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget