Latestಕರಾವಳಿಕ್ರೈಂಮಂಗಳೂರುರಾಜಕೀಯ

ಮಂಗಳೂರು: ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಸಿದ ಆರೋಪ..! ಮಾಜಿ ಶಾಸಕ ಮೊಯಿದ್ದೀನ್ ಬಾವಾ ವಿರುದ್ಧ ಪ್ರಕರಣ ದಾಖಲು..!

445

ನ್ಯೂಸ್ ನಾಟೌಟ್: ಕಾಮಗಾರಿಯ ಬಿಲ್ಲನ್ನು ಮಂಜೂರು ಮಾಡುವ ವಿಷಯದ ಕುರಿತು ಜೂನ್ 9 ರಂದು ರಾತ್ರಿ 8 ಗಂಟೆ ಸುಮಾರಿಗೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಮತ್ತು ಅವರ ಇಬ್ಬರು ಸಹಚರರೊಂದಿಗೆ ಬಂದು ಮಂಗಳೂರಿನ ಸರ್ಕಾರಿ ಕಚೇರಿಯ ಸಿಬ್ಬಂದಿಗೆ ಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.

ಎನ್.ಎಂ.ಪಿ.ಎ ಕಛೇರಿಯ (Deputy chairperson) ಉಪ ಅಧ್ಯಕ್ಷರ ಕಛೇರಿಗೆ ನುಗ್ಗಿ 15 ನಿಮಿಷ ಕಾಲ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವರನ್ನು ಕಛೇರಿಯಿಂದ ಹೊರಗೆ ಹೋಗಲು ಅವಕಾಶ ನೀಡದೆ ಮಾಜಿ ಶಾಸಕ ತಡೆದು ನಿಲ್ಲಿಸಿದ ಘಟನೆ ಬೆಳಕಿಗೆ ಬಂದಿದೆ.

ನಂತರ ಹೊರಗೆ ಬಂದಾಗಲೂ ಹಿಂಬಾಲಿಸುತ್ತಾ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕಾರಿನಲ್ಲಿ ಬೇರೆ ಕರ್ತವ್ಯಕ್ಕೆ ಹೋಗುತ್ತಿರುವಾಗ ಕಾರನ್ನು ಸಹ ತಡೆದು ನಿಲ್ಲಿಸಿ, ವಾದ-ವಿವಾದ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪನಂಬೂರಿನ NMPAಯ ಕಾರ್ಯದರ್ಶಿ ಜೂನ್ 10 ರಂದು ದೂರು ನೀಡಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ಎಸ್‌ಸಿಡಿಸಿಸಿ ಬ್ಯಾಂಕ್ ನ ಹರಿಕಾರ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಗೆ ‘ಗ್ಲೋಬಲ್ ಅಚೀವರ್ಸ್’ ಪ್ರಶಸ್ತಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಿಗೆ ಒಲಿದ ಗೌರವ

See also  ಸುಳ್ಯ: ಅಪಘಾತಕ್ಕೀಡಾಗಿ ನಿಂತಿದ್ದ ಅಗ್ನಿ ಶಾಮಕ ವಾಹನಕ್ಕೆ ಕೊನೆಗೂ ಸಿಕ್ಕಿತು ಮುಕ್ತಿ..! ಮೂರು ವರ್ಷಗಳ ನಂತರ ಆ ವಾಹನ ಗುಜುರಿ ಸೇರಿದ್ದೇಗೆ..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget