ಕರಾವಳಿಕ್ರೈಂವೈರಲ್ ನ್ಯೂಸ್

ಮಂಗಳೂರು: ಇಂದಿರಾ ಕ್ಯಾಂಟೀನ್‌ ಬಳಿ ಬಸ್‌ ನಿರ್ವಾಹಕನ ಶವ ಪತ್ತೆ..! ಪ್ರಕರಣದ ಸುತ್ತ ಹಲವು ಅನುಮಾನ..!

ನ್ಯೂಸ್ ನಾಟೌಟ್: ಮಂಗಳೂರಿನ ಸ್ಟೇಟ್‌ ಬ್ಯಾಂಕ್‌ ನಲ್ಲಿ ಇಂದಿರಾ ಕ್ಯಾಂಟೀನ್‌ ಪರಿಸರದಲ್ಲಿ ಖಾಸಗಿ ಬಸ್‌ ನಿರ್ವಾಹಕರೊಬ್ಬರ ಶವ ಸೋಮವಾರ(ಅ.14) ಪತ್ತೆಯಾಗಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಮಂಗಳೂರು – ವಿಟ್ಲ ಮಧ್ಯೆ ಸಂಚರಿಸುತ್ತಿದ್ದ ಫಲ್ಗುಣಿ, ಸೆಲಿನಾ ಬಸ್ಸುಗಳಲ್ಲಿ ನಿರ್ವಾಹಕನಾಗಿ ದುಡಿಯುತ್ತಿದ್ದ ರಾಜೇಶ್‌ (30) ಮೃತರು ಎಂದು ಗುರುತಿಸಲಾಗಿದೆ. ಅವರನ್ನು ಕೊಲೆ ಮಾಡಿರುವ ಶಂಕೆ ಮೂಡಿದ್ದು, ಇಂದಿರಾ ಕ್ಯಾಂಟೀನ್‌ ಪರಿಸರದಲ್ಲಿ ಅನಾಥ ಸ್ಥಿತಿಯಲ್ಲಿ ಕಂಡಕ್ಟರ್‌ ರಾಜೇಶ ಅವರ ಜರ್ಜರಿತವಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇತ್ತೀಚೆಗೆ ಮಂಗಳೂರು ಖಾಸಗಿ ಬಸ್ ನಿರ್ವಾಹಕರ ನಡುವಿನ ಹಲವು ಹೊಡೆದಾಟಗಳು ಅನುಮಾನಕ್ಕೆ ಕಾರಣವಾಗಿವೆ.

ಪಾಂಡೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

Click

https://newsnotout.com/2024/10/kannada-news-renukaswamy-sahana-kannada-news-darshan/

Related posts

ರಾಮಲಲ್ಲಾನಿಗೆ 27 ಕಿಲೋ ತೂಗುವ ಬೆಳ್ಳಿದೀಪ..! ಬೃಹತ್ ದೀಪಗಳನ್ನು ಬೆಳಗಿದ ಪೇಜಾವರ ಶ್ರೀ

ಕಲ್ಲಡ್ಕ: ಒಂದೇ ದಿನ ಹಲವು ಕಡೆ ಅಗ್ನಿ ಅವಘಡ, ಹೊತ್ತಿ ಉರಿದ ಲಾರಿ !

ಕೇರಳ ಸ್ಟೋರಿ ನಟಿ ಆದಾ ಶರ್ಮಾ ಆಸ್ಪತ್ರೆ ದಾಖಲು..! ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ! ಅಷ್ಟಕ್ಕೂ ನಟಿಗೇನಾಯ್ತು?