ಕ್ರೈಂ

ಮಂಗಳೂರು: ಜೀಪು ಡಿಕ್ಕಿ, ಗೋಳಿತೊಟ್ಟು ನಿವಾಸಿ ಸಾವು

1.2k

ಪುತ್ತೂರು: ಮಂಗಳೂರಿನ ಬೈಕಂಪಾಡಿಯಲ್ಲಿ ನಡೆದ ಅಪಘಾತವೊಂದರಲ್ಲಿ ಗೋಳಿತೊಟ್ಟು ಶಾಂತಿನಗರ ನಿವಾಸಿಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮೃತರನ್ನು ರವೀಂದ್ರ ಆಚಾರಿ (40 ) ಎಂದು ಗುರುತಿಸಲಾಗಿದೆ. ಲಾರಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ರವೀಂದ್ರ ಅವರು ಬೈಕಂಪಾಡಿಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಜೀಪು ಡಿಕ್ಕಿಯಾಗಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಮೃತರು, ತಾಯಿ, ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.

See also  ದರ್ಶನ್ ಪ್ರಕರಣ: ಜೈಲೂಟ ನನಗೆ ಇಷ್ಟ ಆಗಿತ್ತು ಎಂದ ನಟ..! ನಾನು ಜೈಲಿನಲ್ಲಿದ್ದಾಗ ಊಟದ ಸಮಸ್ಯೆ ಇರಲಿಲ್ಲ ಎಂದ ಚೇತನ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget