ನ್ಯೂಸ್ ನಾಟೌಟ್: ಮಂಗಳೂರು ನಗರದಲ್ಲಿ ನಾಲ್ಕು ಪಾನ್ ಮಸಾಲಾ, ಸುಪಾರಿ ಟ್ರೇಡಿಂಗ್ ಕಂಪೆನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು(ಫೆ.13) ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಮಂಗಳೂರಿನ ಪಾನ್ ಮಸಾಲಾ, ಸುಪಾರಿ ಮತ್ತು ಇತರ ಗುಟ್ಕಾ ಉತ್ಪನ್ನಗಳ ವ್ಯವಹಾರಗಳನ್ನು ನಡೆಸುತ್ತಿರುವ ನಾಲ್ಕು ಟ್ರೇಡಿಂಗ್ ಕಂಪೆನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಟ್ರೇಡಿಂಗ್ ಕಂಪೆನಿಗಳ ಕಚೇರಿ, ಗೋಡಾನ್ ಹಾಗೂ ಈ ಕಂಪೆನಿಗಳ ಮಾಲಿಕರ ಮನೆಗಳ ಮೇಲೂ ದಾಳಿ ಐಟಿ ಅಧಿಕಾರಿಗಳು ನಡೆಸಿದ್ದಾರೆ.