ಕರಾವಳಿ

ಮಂಗಳೂರು:ಐಸ್ ಕ್ರೀಂ ದಾಸ್ತಾನು ಕೇಂದ್ರದಲ್ಲಿ ಅಗ್ನಿ ದುರಂತ,ಕೊಟ್ಯಂತರ ರೂ.ಮೌಲ್ಯದ ಸೊತ್ತುಗಳು ಬೆಂಕಿಗಾಹುತಿ

59
Spread the love

ನ್ಯೂಸ್ ನಾಟೌಟ್:ಮಂಗಳೂರು ನಗರದ‌ ಹೊರವಲಯದಲ್ಲಿ ಭಾರಿ ದೊಡ್ಡ ಅಗ್ನಿ ದುರಂತ ನಡೆದಿದೆ. ಕೊಟ್ಯಂತರ ರೂ.ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.ಅಡ್ಯಾರ್ ನ ಪೋಲಾರ್ ಐಸ್ ಕ್ರೀಂ ಸೂಪರ್ ಸ್ಟಾಕಿಸ್ಟ್ ಎಂಬ ನಂದಿನಿ ಐಸ್ ಕ್ರೀಂ ದಾಸ್ತಾನು ಕೇಂದ್ರದಲ್ಲಿ ಇಂದು (ಮಾ.28) ಮುಂಜಾನೆ ಎರಡು ಗಂಟೆಯ ಸುಮಾರಿಗೆ ದುರಂತ ಸಂಭವಿಸಿದೆ.

ಘಟನೆಯ ಪರಿಣಾಮ ವಾಹನ ಸೇರಿದಂತೆ ಸುಮಾರು 5 ಕೋ.ರೂ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿವೆ. ಹರ್ಷಮಣಿ ಎಸ್.ರೈ ಎಂಬವರಿಗೆ ಸೇರಿದ ದಾಸ್ತಾನು ಮಳಿಗೆ ಇದಾಗಿದೆ ಎಂದು ತಿಳಿದು ಬಂದಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಮೂರು ಅಗ್ನಿಶಾಮಕ ವಾಹನಗಳು ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿವೆ. ಕಾರವಾರದಿಂದ ಕಾಸರಗೋಡಿನವರೆಗೆ ನಂದಿನಿ ಐಸ್ ಕ್ರೀಂ ವಿತರಿಸುವ ಕೇಂದ್ರ ಇದಾಗಿದ್ದು,ಈ ಕಟ್ಟಡದಲ್ಲಿ ನಂದಿನಿ ಐಸ್ ಕ್ರೀಮ್ ಪ್ರೊಡಕ್ಟ್ ಗಳ ದಾಸ್ತಾನು ಇಡಲಾಗಿತ್ತು. ಇದರ ಜತೆಗೆ ಐಸ್ ಕ್ರಿಮ್ ತಯಾರಿಕಾ ಘಟಕಕ್ಕೂ ಬೆಂಕಿ ಹಬ್ಬಿದ್ದು, ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಅಗ್ನಿಯ ದುರಂತಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.

See also  ಭಜರಂಗಿಯ ಕಾಲಿಗೆ ಶಿರ ಭಾಗಿ ಎರಗಿ ಕ್ಷಮೆ ಕೇಳಿದರೇ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್‌..?
  Ad Widget   Ad Widget   Ad Widget