ಕರಾವಳಿಮಹಿಳೆ-ಆರೋಗ್ಯವೈರಲ್ ನ್ಯೂಸ್

10 ದಿನಗಳಲ್ಲಿ 21 ಜನರಿಗೆ ಮಂಗನ ಕಾಯಿಲೆ..! ಇಬ್ಬರು ಮಂಗಳೂರು ಮತ್ತು ಮಣಿಪಾಲ ಆಸ್ಪತ್ರೆಗೆ ದಾಖಲು!

ನ್ಯೂಸ್ ನಾಟೌಟ್: ಮಂಗನ ಕಾಯಿಲೆ ಪ್ರಕರಣ ಹೆಚ್ಚುತ್ತಿದ್ದು, ಕಳೆದ 10 ದಿನಗಳಲ್ಲಿ 21 ಜನರಿಗೆ ಸೋಂಕು ತಗುಲಿದೆ.
ಸಿದ್ದಾಪುರ (Siddapur) ತಾಲೂಕಿನಲ್ಲಿ ಮಂಗನ ಕಾಯಿಲೆ ಕಂಡು ಬಂದಿದ್ದು, ಉತ್ತರ ಕನ್ನಡ ಜಿಲ್ಲೆಯ ಜನ ಆತಂಕಕ್ಕೊಳಗಾಗಿದ್ದಾರೆ.

ಮಂಗನ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ. ಆರೋಗ್ಯ ಇಲಾಖೆ ಜನರಗೆ ಅರಣ್ಯಕ್ಕೆ ಹೋಗುವುದನ್ನು ಕಡಿಮೆ ಮಾಡಲು ಸೂಚನೆ ನೀಡಲಾಗಿದೆ.
ಜ್ವರ, ಕೆಮ್ಮು ಲಕ್ಷಣ ಕಂಡು ಬಂದಲ್ಲಿ ಸಂಪರ್ಕಿಸಲು ಸೂಚನೆ ನೀಡಿದ್ದೇವೆ. ಒಟ್ಟು 21 ಜನರ ಪೈಕಿ 8 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಬ್ಬರು ಮಂಗಳೂರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ಆರು ಜನ ಸಿದ್ದಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 13 ಜನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮಂಗನ ಕಾಯಿಲೆ ಎಂಬುದು ಮಂಗಗಳಿಗೆ ಸೋಂಕು ತಗುಲಿಸುವ ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದೆ. 1957 ರಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಇದು ಪತ್ತೆಯಾಗಿತ್ತು. ಅಂದಿನಿಂದ ವಾರ್ಷಿಕವಾಗಿ ಸುಮಾರು 400-500 ರಷ್ಟು ಪ್ರಕರಣಗಳು ಮಾನವರಲ್ಲಿ ಪತ್ತೆಯಾಗಿವೆ. ಈ ಸೋಂಕು ಪ್ರಾಣಿಗಳಿಂದ ವ್ಯಕ್ತಿಗಳಿಗೆ ಸಾಂಕ್ರಾಮಿಕವಾಗಿ ಹರಡುತ್ತದೆ. ಸೋಂಕು ತಗುಲಿದವರಲ್ಲಿ ಜ್ವರ, ತಲೆನೋವು ಮತ್ತು ಶೀತ ಕಂಡುಬರುತ್ತದೆ ಎನ್ನಲಾಗಿದೆ.

Related posts

ಬೆಳ್ತಂಗಡಿ: ಹೃದಯಾಘಾತಕ್ಕೆ ಪಿಯುಸಿ ವಿದ್ಯಾರ್ಥಿ ಬಲಿ

ಜಾರಂದಾಯ ದೈವಸ್ಥಾನ ಮತ್ತು ನಾಗಬ್ರಹ್ಮ ಪೀಠಕ್ಕೆ ದುಷ್ಕರ್ಮಿಗಳಿಂದ ಹಾನಿ

ಗುತ್ತಿಗಾರು : ಸಂಸದ ರಾಜ್ಯ ಬಿ.ಜೆ.ಪಿ ಅಧ್ಯಕ್ಷ ನಳೀನ್ ಕುಮಾರ್ ಭೇಟಿ