ಕರಾವಳಿ

ಮಂಗಳೂರು: ಬೀದಿ ನಾಯಿಗಳ ಆಶ್ರಯದಾತೆ ರಜನಿ ಶೆಟ್ಟಿ ಮೇಲೆ ಹಲ್ಲೆ, ರಕ್ತ ಬರುವಂತೆ ಹಲ್ಲೆ ಮಾಡಿದ ನೆರೆಮನೆಯ ಮಹಿಳೆ

ನ್ಯೂಸ್ ನಾಟೌಟ್: ಬೀದಿ ನಾಯಿಗಳಿಗೆ ಆಸರೆ ನೀಡಿ ಈ ಹಿಂದೆ ಭಾರಿ ಸುದ್ದಿಯಾಗಿದ್ದ ರಜನಿ ಶೆಟ್ಟಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು, ನೆರೆಮನೆಯ ಮಹಿಳೆಯೊಬ್ಬಳು ಹಲ್ಲೆ ನಡೆಸಿ ಗಾಯಗೊಳಿಸಿದ್ದಾಳೆ ಅನ್ನುವ ಆರೋಪ ಕೇಳಿ ಬಂದಿದೆ. ಹಲ್ಲೆ ಮಾಡಿದವಳನ್ನು ಮಂಜುಳಾ ಶೆಟ್ಟಿ ಎಂದು ಗುರುತಿಸಲಾಗಿದೆ. ಕಳೆದ 22 ವರ್ಷಗಳಿಂದ ಬೀದಿ ನಾಯಿಗಳ ಆರೈಕೆ ಮಾಡುತ್ತಿರುವ ರಜನಿ ಶೆಟ್ಟಿ ಅವರಿಗೆ ಇದೀಗ ನಾಯಿಗಳ ವಿಚಾರದಲ್ಲೇ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ರಜನಿಯವರು ಬಾಡಿಗೆ ಮನೆಯಲ್ಲಿದ್ದು ಅಲ್ಲಿ ನಾಯಿಗಳನ್ನು ಸಾಕುತ್ತಿದ್ದಾರೆ. ಈ ಜಾಗವನ್ನು ಖಾಲಿ ಮಾಡಬೇಕೆಂದು ಮಂಜುಳಾ ಅನ್ನುವ ಮಹಿಳೆ ಗಲಾಟೆ ಎತ್ತಿದ್ದಾಳೆ ಎಂದು ತಿಳದು ಬಂದಿದೆ. ಈ ಬಗ್ಗೆ ಮಾತನಾಡಿರುವ ರಜನಿ ಶೆಟ್ಟಿಯವರು ನಾನು ಕಳೆದ 22 ವರ್ಷಗಳಿಂದ ಬೀದಿ ನಾಯಿಗಳ ಆರೈಕೆ ಮಾಡುತ್ತಿದ್ದೇನೆ. ನಾಯಿಗಳಿಂದಾಗಿ ಯಾರಿಗೂ ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾಗಿಲ್ಲ. ಆದರೆ ಮಂಜುಳಾ ನನ್ನೊಂದಿಗೆ ಪ್ರತಿದಿನ ಜಗಳವಾಡುತ್ತಾರೆ ಎಂದು ಆರೋಪಿಸಿದ್ದಾರೆ.

Related posts

ಗ್ರಾಮೀಣ ಜನರಿಗೆ ಅತ್ಯುತ್ತಮ ಸೇವೆ : ಶಾಸಕ ಅಶೋಕ್ ರೈ

ಮಂಗಳೂರು: ಪಾಳು ಬಿದ್ದ ಬಾವಿಯ ಕಟ್ಟೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ವೇಳೆ ಅವಘಡ..! ಬಾವಿಗೆ ಬಿದ್ದು ಮೀನುಗಾರ ಸಾವು..!

ಸಂಪಾಜೆ : ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ