ಕರಾವಳಿ

ಮಂಗಳೂರು:ಪಾಝಿಲ್ ಸಹೋದರನ ಮೇಲೆ ಹಲ್ಲೆ ಪ್ರಕರಣ,ದೂರು-ಪ್ರತಿದೂರು ದಾಖಲು

ನ್ಯೂಸ್ ನಾಟೌಟ್ : ಸುರತ್ಕಲ್ ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಫಾಝಿಲ್ ಅವರ ಸಹೋದರನಿಗೆ ತಂಡದಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.ಮಂಗಳೂರು ಸಮೀಪದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿರುವುದಾಗಿ ತಿಳಿದು ಬಂದಿದೆ.

ಕಾಟಿಪಳ್ಳದ ನಿವಾಸಿಗಳಾದ ಪ್ರೀತಂ ಶೆಟ್ಟಿ, ಆಕಾಶ್, ಪ್ರಕಾಶ್, ಬಂಟ್ವಾಳದ ಹರ್ಷಿತ್ ಸೇರಿ ಐವರಿದ್ದ ತಂಡ ಹಲ್ಲೆ, ಕೊಲೆ ಬೆದರಿಕೆ ಹಾಕಿರುವುದಾಗಿ ಗಾಯಾಳು ಆದಿಲ್ ಎಂಬವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.ಮಂಗಳಪೇಟೆಯ ನಿವಾಸಿಗಳಾದ ಆದಿಲ್ ಮೆಹರೂಫ್, ಉಮರ್ ಫಾರೂಕ್, ಅಬ್ದುಲ್ ಹಮೀದ್, ಉಮರ್ ಫಾರೂಕ್ ಎಂಬವರು ಹಲ್ಲೆ, ಕೊಲೆ ಬೆದರಿಕೆ ಹಾಕಿರುವುದಾಗಿ ನಾಗೇಶ್ ದೇವಾಡಿಗ ಎಂಬವರ ಪ್ರತಿ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕೆಳ ತಿಂಗಳ‌ ಹಿಂದೆ ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಫಾಝಿಲ್ ಅವರ ಸಹೋದರ ಆದಿಲ್ ಎಂಬವರಿಗೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಸುರತ್ಕಲ್ ನ ಕಾಟಿಪಳ್ಳದ ಗಣೇಶ್ ಪುರ ಎಂಬಲ್ಲಿ ಇಂದು ನಡೆದಿತ್ತು.

Related posts

ಸುಳ್ಯ:ಪಂಜದಲ್ಲಿ ವಿದ್ಯುತ್ ಕಂಬಕ್ಕೆ ತಾಗಿದ ಕಾಂಕ್ರೀಟ್ ಮಿಕ್ಸರ್ ಯಂತ್ರ,ಅಪಾರ ಹಾನಿ,ಅದೃಷ್ಟವಶಾತ್ ಪಾರಾದ ಚಾಲಕ

NMPUC ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ, ರಾಜ್ಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ವಿದ್ಯಾರ್ಥಿ ಯಾರು..?

ಕಣ್ಮನಸೆಳೆದ NMC ವಿದ್ಯಾರ್ಥಿಗಳ ಚಂದದ ವಿಜ್ಞಾನ ಮಾದರಿ ಪ್ರದರ್ಶನ, ಉಪನ್ಯಾಸಕ ವೃಂದದ ಮೆಚ್ಚುಗೆ