Latestಕ್ರೈಂರಾಜ್ಯವೈರಲ್ ನ್ಯೂಸ್

ಮಂಗಳೂರು: ಮದರಂಗಿ ಹಾಕಿಸಿಕೊಂಡು ಬರಲು ಪಾರ್ಲರ್ ಗೆ ಹೋದ ವಧು ಮತ್ತೆ ಬರಲೇ ಇಲ್ಲ..! ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಕೂಡ ಅದ್ದೂರಿಯಾಗಿ ನಡೆದಿತ್ತು..!

6.2k

ನ್ಯೂಸ್‌ ನಾಟೌಟ್‌: ಮದುವೆಯ ಹಿಂದಿನ ದಿನ ಮದರಂಗಿ ಹಾಕಿಸಿಕೊಂಡು ಬರುವೆ ಎಂದು ಹೇಳಿ ಬ್ಯೂಟಿ ಪಾರ್ಲರ್ ಗೆ ಹೋದ ವಧು ನಾಪತ್ತೆಯಾಗಿದ್ದಾಳೆ. ಈ ಘಟನೆಯು ಮಂಗಳೂರಿನ ಬೋಳಾರ್ ನಲ್ಲಿ ನಡೆದಿದೆ.

22 ವರ್ಷದ ಪಲ್ಲವಿ ನಾಪತ್ತೆಯಾದ ಯುವತಿ ಎಂದು ಗುರುತಿಸಲಾಗಿದೆ. ಮದುವೆಯ ಹಿಂದಿನ ದಿನ ಮೆಹಂದಿ ಹಾಕಿಸಿಕೊಂಡು ಬರುವೆ ಎಂದು ಮನೆಯಲ್ಲಿ ಹೇಳಿ ಬ್ಯೂಟಿ ಪಾರ್ಲರ್ ಗೆ ಹೋಗಿದ್ದಳು.

ಆದರೆ ತಡರಾತ್ರಿಯಾದರೂ ಆಕೆಯು ಮನೆಗೆ ವಾಪಾಸಾಗಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 16 ರಂದು ಮದುವೆಯು ನಡೆಯಬೇಕಿತ್ತು. ಆದರೆ ಒಂದು ದಿನ ಮುಂಚೆಯೇ ಯುವತಿಯು ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ. ಆಕೆಯ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಕೂಡ ಸ್ವಿಚ್ ಆಫ್ ಎಂದು ಬಂದಿದೆ. ಮದುವೆಗೆ ಒಂದು ದಿನ ಇರುವಾಗಲೇ ಯುವತಿಯು ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು.

ಮನೆಯವರು ಪಲ್ಲವಿಯ ಒಪ್ಪಿಗೆಯ ಮೇರೆಗೆ ಈ ಮದುವೆ ನಿಶ್ಚಯ ಮಾಡಿದ್ದರು. ಹೀಗಾಗಿ ಈ ಮದುವೆಯಾಗಬೇಕಿದ್ದ ಯುವಕನ ಜೊತೆಗೆ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಸೇರಿದಂತೆ ಮೆಹಂದಿ ಪಾರ್ಟಿ ಎಲ್ಲವೂ ಅದ್ದೂರಿಯಾಗಿಯೇ ನಡೆದಿತ್ತು. ಹೀಗಿರುವಾಗ ಮದುವೆಯ ಹಿಂದಿನ ದಿನವೇ ವಧು ನಾಪತ್ತೆಯಾಗಿರುವುದರಿಂದ ನಡೆಯಬೇಕಿದ್ದ ಮದುವೆಯು ನಿಂತು ಹೋಗಿದೆ. ಈ ಘಟನೆಗೆ ಸಂಬಂಧ ಪಟ್ಟಂತೆ ಮಂಗಳೂರು ದಕ್ಷಿಣ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕ್ರೈಸ್ತ ಧರ್ಮದ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ನಿಧನ, ಕ್ರೈಸ್ತ ಸಮುದಾಯದಲ್ಲಿ ಮಡುಗಟ್ಟಿದ ಶೋಕ

ಉಜ್ಜಯಿನಿ ಮಹಾಕಾಳೇಶ್ವರನ ದರ್ಶನ ಪಡೆದ ರಾಕಿಂಗ್​ ಸ್ಟಾರ್ ಯಶ್..! ರಾವಣ ಸಿನಿಮಾ ಶೂಟಿಂಗ್ ಗೆ ತಯಾರಿ

See also  ಪೆರಾಜೆಯ 'ರಾಜ ಹಂಸ' ಆಟೋ ಜೋಡುಪಾಲದಲ್ಲಿ ಅಪಘಾತ..!ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದಾಗ ದುರ್ಘಟನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget