ಕರಾವಳಿ

ಬಾಂಬರ್ ಶಾರಿಖ್ ಟಾರ್ಗೆಟ್ ಯಾರಾಗಿತ್ತು? ಎಲ್ಲಿ ಸ್ಫೋಟಿಸಲು ಪ್ಲಾನ್ ಮಾಡಿದ್ದ?

510

ನ್ಯೂಸ್ ನಾಟೌಟ್: ಉಗ್ರ ಶಾರಿಖ್ ಸಿಕ್ಕಿಬಿದ್ದ ಬೆನ್ನಲ್ಲೇ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಆತ ಯಾರನ್ನು ಟಾರ್ಗೆಟ್ ಮಾಡಿಕೊಂಡು ಮೈಸೂರಿನಿಂದ ಮಂಗಳೂರಿಗೆ ಬಂದಿದ್ದ? ಎಲ್ಲಿ ಬಾಂಬ್ ಸ್ಫೋಟಿಸಲು ಪ್ಲಾನ್ ಮಾಡಿಕೊಂಡಿದ್ದ ಹೀಗೆ ಹತ್ತು ಹಲವು ಅನುಮಾನಗಳ ಹಿಂದೆ ಪೊಲೀಸರ ಶೋಧ ಶುರುವಾಗಿದೆ.

ಮೂಲಗಳ ಪ್ರಕಾರ ಈತ ಪಂಪ್‌ವೆಲ್ ಪ್ಲೈ ಜಂಕ್ಷನ್‌ನಲ್ಲಿ ಬಾಂಬ್ ಸ್ಫೋಟಕ್ಕೆ ಸಿದ್ಧತೆ ಮಾಡಿಕೊಂಡಿದ್ದ. ಎಲ್ಲ ತಯಾರಿಯೊಂದಿಗೆ ಮಂಗಳೂರಿಗೆ ಬಂದಿದ್ದ. ಈತನ ಪ್ಲಾನ್ ವರ್ಕ್ ಆಗಿದ್ದರೆ ಭಾರಿ ಪ್ರಮಾಣದ ಜೀವ ಹಾನಿಯಾಗುತ್ತಿತ್ತು. ಅದಕ್ಕಾಗಿ ಮೈಸೂರಿನ ಎಸ್ ಎಮ್ ಎಮ್ ತರಬೇತಿ ಕೇಂದ್ರದಲ್ಲಿ ಪ್ರೇಮ್ ರಾಜ್ ಹೆಸರಿನ ದಾಖಲೆಯನ್ನು ನೀಡಿ ಸೇರಿಕೊಂಡಿದ್ದ. ಅಲ್ಲಿ ತಾನು ಮುಸ್ಲಿಂ ಎಂದು ಯಾರಿಗೂ ತಿಳಿಯಬಾರದೆಂದು ಹಿಂದೂ ಧರ್ಮದ ಸಾಂಪ್ರದಾಯಗಳನ್ನು ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈತ ಮುಸ್ಲಿಂ ಎನ್ನುವುದು ಯಾರಿಗೂ ತಿಳಿಯದಂತೆ ನಾಟಕ ಮಾಡಿಕೊಂಡಿದ್ದ. ಹಿಂದೂ ಧರ್ಮದ ಆಚರಣೆಗಳನ್ನು ಪಾಲಿಸಿಕೊಂಡು ಶಿವನ ಆರಾಧನೆ ಮಾಡುತ್ತಿದ್ದ. ಈತನ ಶಾಪ್‌ನ ಹತ್ತಿರವೇ ಮಸೀದಿ ಇದ್ದರೂ ಆತ ಅಲ್ಲಿಗೆ ತೆರಳುತ್ತಿರಲಿಲ್ಲ. ಹೀಗೆ ನಾಟಕವನ್ನೇ ಜೀವನವನ್ನಾಗಿಸಿಕೊಂಡು ಬದುಕುತ್ತಿದ್ದ. ಈತನ ಜೀವನ ಶೈಲಿ, ಭಾಷೆ ಎಲ್ಲದರಲ್ಲೂ ಅನುಮಾನ ಬಾರದಂತೆ ನಡೆದುಕೊಂಡಿದ್ದ ಅನ್ನುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

See also  ಪುಷ್ಪ-2 ಚಿತ್ರದಲ್ಲಿಯೂ ರಶ್ಮಿಕಾನೇ ಹಿರೋಯಿನ್,ಕೊಡಗಿನ ಬೆಡಗಿ ಈ ಕುರಿತು ಏನು ಹೇಳಿದ್ದಾರೆ ನೋಡಿ..
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget