Latestಕರಾವಳಿವೈರಲ್ ನ್ಯೂಸ್

ಮಂಗಳೂರು: ನಾಡ ದೋಣಿ ಮಗುಚಿ ಬಿದ್ದು ಇಬ್ಬರು ನಾಪತ್ತೆ..! ಗ್ರಾಮಸ್ಥರಿಂದ ಹುಡುಕಾಟ..!

592

ನ್ಯೂಸ್ ನಾಟೌಟ್: ನಾಡ ದೋಣಿ ಮಗುಚಿದ ಪರಿಣಾಮ ಇಬ್ಬರು ನಾಪತ್ತೆಯಾದ ಘಟನೆ ಮಂಗಳೂರಿನ ಬೆಂಗ್ರೆ ಅಳಿವೆ ಬಾಗಿಲು ಸಮೀಪ ಮೇ 30ರ ಶುಕ್ರವಾರ ಸಂಭವಿಸಿದೆ.

ತೋಟ ಬೆಂಗ್ರೆ ಅಳಿವೆ ಬಾಗಿಲು ಸಮೀಪ ಮೀನು ಹಿಡಿಯುತ್ತಿದ್ದಾಗ ಜೋರಾದ ಮಳೆ ಗಾಳಿಯ ರಭಸಕ್ಕೆ ದೋಣಿ ಮಗುಚಿದ್ದು, ದೋಣಿಯಲ್ಲಿದ್ದವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ದೋಣಿಯಲ್ಲಿದ್ದ ಯಶವಂತ, ಕಮಲಾಕ್ಷ ಎಂಬವರು ನಾಪತ್ತೆಯಾದವರು ಎಂದು ಗುರುತಿಸಲಾಗಿದೆ.

ನಾಡ ದೋಣಿಯ ಪೆಟ್ರೋಲ್ ಟ್ಯಾಂಕ್ ಬೆಂಗ್ರೇ ಸಮೀಪ ದಡಕ್ಕೆ ಬಂದು ಬಿದ್ದಿದೆ. ನಾಡ ದೋಣಿ ಇನ್ನೂ ಪತ್ತೆಯಾಗಿಲ್ಲ. ಗ್ರಾಮಸ್ಥರು ಹುಡುಕಾಟ ಆರಂಭಿಸಿದ್ದಾರೆ.

ಮಂಗಳೂರು: ಮನೆ ಕುಸಿತದಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿಕೆ..! ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗು ಸಾವು..! 

See also  ಬೆಂಕಿಯಿಂದ ತಪ್ಪಿಸಿಕೊಳ್ಳಲು 7ನೇ ಮಹಡಿಯಿಂದ ಇಬ್ಬರು ಮಕ್ಕಳನ್ನು ಹಿಡಿದುಕೊಂಡು ಜಿಗಿದ ತಂದೆ..! ಮೂವರೂ ಸಾವು..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget