ಕರಾವಳಿಕ್ರೈಂದಕ್ಷಿಣ ಕನ್ನಡರಾಜ್ಯವೈರಲ್ ನ್ಯೂಸ್

ಮಂಗಳೂರು: ಬ್ರಿಜೇಶ್ ಚೌಟ ಗೆಲುವಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತನ ಮೇಲೆ ಹಲ್ಲೆ..! ಕೆಲಸದಿಂದ ವಾಪಸ್ಸಾಗುತ್ತಿದ್ದ ವೇಳೆ ಕಾದು ಕುಳಿತು ಕೃತ್ಯ..!

ನ್ಯೂಸ್ ನಾಟೌಟ್ : ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪಟಾಕಿ ಸಿಡಿಸಿದಕ್ಕೆ ಸಂಘ ಪರಿವಾರದ ಕಾರ್ಯಕರ್ತನಿಗೆ ಹಲ್ಲೆ ನಡೆಸಿರುವ ಆರೋಪ ಮಂಗಳೂರಿನ ಕುಂಪಲ ಕೇಸರಿನಗರ ಎಂಬಲ್ಲಿ ಬುಧವಾರ(ಜೂನ್.5) ವರದಿಯಾಗಿದೆ. ಕಾರ್ಯಕರ್ತ ಪ್ರವೀಣ್ ಪೂಜಾರಿ ಯಾನೆ ಪಿಟ್ಟಿ (39) ಎಂಬವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತ ಗೌತಮ್ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಜೂ. 4 ರಂದು ಚುನಾವಣೆ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಲಾಗಿತ್ತು. ಈ ವಿಚಾರದಲ್ಲಿ ಸ್ಥಳಿಯ ಬಿಜೆಪಿ ಕಾರ್ಯಕರ್ತ (ಬಜರಂಗದಳ ಕಾರ್ಯಕರ್ತನೂ ಆಗಿರುವ) ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂಬಂಧ ಗುರುವಾರ ಕೆಲಸದಿಂದ ವಾಪಸ್ಸಾಗುತ್ತಿದ್ದ ಪ್ರವೀಣ್ ಪೂಜಾರಿಯನ್ನು ಅಡ್ಡಗಟ್ಟಿದ ಗೌತಮ್ ಹಲ್ಲೆ ನಡೆಸಿ ದೂಡಿ ಹಾಕಿದ್ದಾರೆ ಎನ್ನಲಾಗಿದೆ. ಪ್ರವೀಣ್ ತಲೆಗೆ ಗಾಯಗಳಾಗಿದ್ದು, ಗಾಯಾಳುವನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click 👇

https://newsnotout.com/2024/06/annaimalai-dmk-photo-and-issue-related-to-election
https://newsnotout.com/2024/06/loka-sabha-election-and-bjp-ministers-are-lost-thair-majority
https://newsnotout.com/2024/06/x-tweeter-and-its-rules-on-users-kannada-news

Related posts

ಗೂಗಲ್‌ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಹುಡುಕಲ್ಪಟ್ಟ ಕ್ರಿಕೆಟಿಗ ಯಾರು..? ಗೂಗಲ್ ಬಿಡುಗಡೆ ಮಾಡಿದ ವಿಡಿಯೋದಲ್ಲೇನಿದೆ?

ಅಂಬಾನಿ ಕುಟುಂಬ ಈಕೆಗೆ ನೀಡಿದ ಸಂಭಾವನೆ ಎಷ್ಟು ಕೋಟಿ ಗೊತ್ತಾ..? ಈಕೆ ಧರಿಸಿದ್ದ 7 ಲಕ್ಷ ರೂಪಾಯಿಯ ಈ ಹೆಡ್ ಫೋನ್ ನಲ್ಲಿ ಅಂತದ್ದೇನಿದೆ..?

ಸಿಎಂ ಎಚ್ಚರಿಕೆಯ ಬಳಿಕವೂ ನಿಲ್ಲದ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ..! ವಿಷದ ಮಾತ್ರೆ ಸೇವಿಸಿ ಮಹಿಳೆ ಆತ್ಮಹತ್ಯೆ..!