ಕರಾವಳಿ

ಮಂಗಳೂರು: ‘ಚಿನ್ನದ ಹಲ್ಲಿನ’ ಹನೀಫನ ಬಂಧನ, ಪೊಲೀಸರು ‘ಬಂಗಾರ್ ಕೂಳಿ’ ಹೆಡೆಮುರಿ ಕಟ್ಟಿದ್ದು ಹೇಗೆ..?

271

ನ್ಯೂಸ್ ನಾಟೌಟ್: ‘ಬಂಗಾರ್ ಕೂಳಿ’ ಖ್ಯಾತಿಯ ಹನೀಫ್ ಅಲಿಯಾಸ್ ಮೊಹಮ್ಮದ್ ಹನೀಫ್ ನನ್ನು ಪೊಲೀಸರು ಬಂಧಿಸಿದ್ದಾರೆ.

19 ವರ್ಷದ ಎಲ್‌ಪಿಸಿ ಆರೋಪಿ ‘ಬಂಗಾರ್ ಕೂಳಿ’ ಹನೀಫ್ ಕಳೆದ ಕೆಲವು ವರ್ಷಗಳಿಂದ ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದವನಾಗಿದ್ದ. ತಲೆ ಮರೆಸಿಕೊಂಡು ತಿರುಗಾಡುತ್ತಿದ್ದ. ಇದೀಗ ಆತನನ್ನು ಸಿಸಿಬಿ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಜಪೆ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಸಿಆರ್ 192/2004 U/S 395 R/W 34 IPC ಪ್ರಕಾರ ಪ್ರಕರಣ ದಾಖಲಾಗಿದೆ.

ಮುರಿದು ಬಿದ್ದ ಹಲ್ಲಿನ ಜಾಗದಲ್ಲಿ ಈಗ ಹನೀಫ ಚಿನ್ನದ ಹಲ್ಲನ್ನು ಹೊಂದಿದ್ದಾನೆ. ಹೀಗಾಗಿ ಈತ ‘ಬಂಗಾರ್ ಕೂಳಿ’ ಎಂದೇ ಖ್ಯಾತಿ ಪಡೆದಿದ್ದ. ಈತ ಮಂಗಳೂರಿನ ಮಲ್ಲೂರು ಉಲ್ಲಾಯಬೆಟ್ಟು ಮೂಲದವನು ಎಂದು ತಿಳಿದು ಬಂದಿದೆ.

See also  ಭಯೋತ್ಪಾದಕರಿಗೆ ಹಣ ನೀಡಿದವರೇ ಪ್ರವೀಣ್ ಹತ್ಯೆಗೂ ನೆರವು ನೀಡಿದ್ದರು..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget