ಕರಾವಳಿ

ಮಂಗಳೂರು: ಪೆಟ್ರೋಲ್ ಕಾರಿಗೆ ಡೀಸೆಲ್ ತುಂಬಿಸಿದ ಪೆಟ್ರೋಲ್ ಪಂಪ್ ಸಿಬ್ಬಂದಿ..! ಸಿಬ್ಬಂದಿ ಎಡವಟ್ಟಿಗೆ ಕಾರಿನ ಎಂಜಿನ್ ಸಂಪೂರ್ಣ ಸೀಜ್, ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ ಕಾರಿನ ಮಾಲೀಕ

ನ್ಯೂಸ್ ನಾಟೌಟ್: ಕಾರಿಗೆ ಪೆಟ್ರೋಲ್ ಹಾಕುವ ಎಂದು ಪೆಟ್ರೋಲ್ ಪಂಪ್ ಗೆ ಹೋದ ಗ್ರಾಹಕರೊಬ್ಬರ ಕಾರಿಗೆ ಅಲ್ಲಿನ ಸಿಬ್ಬಂದಿ ಪೆಟ್ರೋಲ್ ಹಾಕುವ ಬದಲು ಡೀಸೆಲ್ ಹಾಕಿ ಮಹಾ ಎಡವಟ್ಟು ಮಾಡಿದ್ದಾನೆ. ಪರಿಣಾಮ ಕಾರಿನ ಎಂಜಿನ್ ಸಂಪೂರ್ಣ ಸೀಜ್ ಆಗಿದೆ. ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಹೇಳಲಾಗಿದೆ.

ಅಂದ ಹಾಗೆ ಈ ಘಟನೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಲ್ಮಠ ಬಳಿಯ ಪೆಟ್ರೋಲ್ ಪಂಪ್ ವೊಂದರಲ್ಲಿ. ಕಾರು ಮಾಲೀಕ ಹೋಟೆಲ್ ಉದ್ಯಮಿ ಜೀವನ್ ಶೆಟ್ಟಿ ಅವರು ಏ. 5ರಂದು ಮಧ್ಯಾಹ್ನ 12ಗಂಟೆಗೆ ಪೆಟ್ರೋಲ್ ತುಂಬಿಸುವುದಕ್ಕೆಂದು ಪಂಪ್ ಗೆ ಹೋಗಿದ್ದರು, ಈ ವೇಳೆ ಪೆಟ್ರೋಲ್‌ ಟ್ಯಾಂಕ್‌ನ ಕ್ಯಾಪ್‌ ಮೇಲೆ ಪೆಟ್ರೋಲ್‌ ಎಂದು ನಮೂದಿಸಿದ್ದರೂ ಸಿಬ್ಬಂದಿ ಅಚಾತುರ್ಯದಿಂದ ಡಿಸೇಲ್ ತುಂಬಿಸಿದ್ದಾರೆ. ಸಿಬಂದಿಯ ಎಡವಟ್ಟಿನಿಂದಾಗಿ ಕಾರಿನ ಎಂಜಿನ್‌ ಸಂಪೂರ್ಣ ಸೀಜ್ ಆಗಿದೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಆರೋಪಿಸಲಾಗಿದೆ.

Related posts

ಬೆಳ್ತಂಗಡಿ: ಹರೀಶ್ ಪೂಂಜಾ ವಿಜಯೋತ್ಸವದಲ್ಲಿ ಭಾಗಿಯಾಗಿದ್ದ ಗ್ರಾ.ಪಂ ಸಿಬ್ಬಂದಿ ಅಮಾನತು! ಉಜಿರೆ ಪಿಡಿಒ ಪ್ರಕಾಶ್ ಶೆಟ್ಟಿ ಆದೇಶ!

ಬೆಳ್ತಂಗಡಿ: ನಾಳೆಯಿಂದ (ಜು.7) ಪ್ರವಾಸಿಗರ ನೆಚ್ಚಿನ ತಾಣ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ, ಅಷ್ಟಕ್ಕೂ ನಿಷೇಧ ಹೇರಿದ್ದು ಏಕೆ ಗೊತ್ತಾ..?

ಬಾಳುಗೋಡು: ಎಚ್ಚರ ತಪ್ಪಿದ್ರೆ ಜೀವಕ್ಕೇ ಅಪಾಯ, ಜನ ಸಂಚಾರದ ವೇಳೆಯೇ ಸಂಭವಿಸಬಹುದು ದುರಂತ ..!