ಕರಾವಳಿ

ದುಬೈನಲ್ಲಿ ಮಂಗಳೂರಿನ ಯುವತಿ ಕೊನೆಯುಸಿರು;ಮದುವೆಯ ಸಿದ್ಧತೆಯಲ್ಲಿದ್ದಾಗಲೇ ಏಕೈಕ ಮಗಳನ್ನು ಕಳೆದುಕೊಂಡು ಪೋಷಕರ ಕಣ್ಣೀರು?ಅಷ್ಟಕ್ಕೂ ಏನಿದು ಘಟನೆ?

ನ್ಯೂಸ್‌ ನಾಟೌಟ್‌: ದುಬೈನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಯುವತಿ ದುರಂತ ಅಂತ್ಯ ಕಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೋಟೆಕಾರು, ಬೀರಿಯ ಕೆಂಪುಮಣ್ಣು ನಿವಾಸಿ ವಿದಿಶಾ (28) ಎಂಬ ಯುವತಿ ದುಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದಾರುಣವಾಗಿ ಕೊನೆಯುಸಿರೆಳೆದಿದ್ದಾರೆ.

ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣು ಅವರ ಏಕೈಕ ಪುತ್ರಿ ವಿದಿಶಾ ದುಬೈನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲೇ ವಾಸವಾಗಿದ್ದರು. ವಿದಿಶಾ ಪ್ರತಿದಿನ ಕಂಪೆನಿಯ ಕ್ಯಾಬ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ವಿದಿಶಾ ಗುರುವಾರ ಕ್ಯಾಬ್ ತಪ್ಪಿದ ಹಿನ್ನಲೆ ತಮ್ಮದೇ ಕಾರಿನಲ್ಲಿ ಆಫೀಸ್‌ಗೆ ತೆರಳಿದ್ದಾರೆ.

ಈ ವೇಳೆ ವಿದಿಶಾ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ. ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ವಿದಿಶಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾರೆ.ಪ್ರತಿಭಾನ್ವಿತರಾಗಿದ್ದ ವಿದಿಶಾ ವಿದ್ಯಾರ್ಥಿ ದಿಸೆಯಲ್ಲೇ ರೋಟರಿ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.

ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು ವರ್ಷ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದರು. 2019ರಲ್ಲಿ ದುಬೈಗೆ ತೆರಳಿ ಅಲ್ಲಿನ ಏರ್‌ಫೋರ್ಟ್‌ನಲ್ಲಿ ಅಧಿಕಾರಿಯಾಗಿ ಕಳೆದ ಐದು ವರುಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.

ಹೊಸ ಕಾರು ಖರೀದಿಸಿದ್ದ ವಿದಿಶಾ ದುಬೈಯಲ್ಲಿ ವಾಹನ ಚಾಲನಾ ಪರವಾನಿಗೆ ಪಡೆದ ಬಳಿಕ ಆರು ತಿಂಗಳ ಹಿಂದೆ ಹೊಸ ಕಾರು ಖರೀದಿಸಿದ್ದರು. ಪೋಷಕರು ಸದ್ಯ ಪುತ್ರಿಯ ಮದುವೆಯ ಸಿದ್ಧತೆ ನಡೆಸುತ್ತಿರುವಾಗಲೇ ಈ ದುರಂತ ನಡೆದಿದೆ. ವಿದೇಶದಲ್ಲಿ ಮಗಳು ಬಾರದ ಲೋಕಕ್ಕೆ ತೆರಳಿದ ಸುದ್ದಿಯಿಂದಾಗಿ ಪೋಷಕರು ಕಂಗಾಲಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.

Related posts

ಕೇವಲ ರೂ. 1,499 ಖರೀದಿಗೆ ದುಬಾರಿ ಬೆಲೆಯ I PHONE ಗೆಲ್ಲಿ..! ಪುತ್ತೂರಿನ ದರ್ಬೆಯಲ್ಲಿ ಸಿಗುವ ಬಿಗ್ ಡಿಸ್ಕೌಂಟ್ ಎಲ್ಲೂ ಸಿಗಲ್ಲ, ಇಂದೇ ಭೇಟಿ ಕೊಡಿ

ಅರಂತೋಡು: ಅಡ್ತಲೆ ವಾರ್ಡ್‌ನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ , ಮಾಜಿ ಸಚಿವ ಎಸ್.ಅಂಗಾರರಿಗೆ ಸನ್ಮಾನ,ನೂತನ ಶಾಸಕಿ ಕು.ಭಾಗೀರಥಿ ಮುರಳ್ಯರಿಗೆ ಅಭಿನಂದನಾ ಕಾರ್ಯಕ್ರಮ

Kerala:ನಟಿ,ಆ್ಯಂಕರ್ ಪರ್ಲಿಮಾನಿ ಮನೆಗೂ ಐಟಿ ದಾಳಿ