ನ್ಯೂಸ್ ನಾಟೌಟ್: ಬೈಕ್ ಸವಾರನಿಗೆ ಡಿಕ್ಕಿ ಹೊಡೆಯಲು ಹೋಗಿ ಕಾರು ಚಾಲಕನೋರ್ವ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಮಂಗಳೂರಿನ ಬಿಜೈ ಕಾಪಿಕಾಡಿನ 6ನೇ ಮುಖ್ಯ ರಸ್ತೆಯಲ್ಲಿ ಗುರುವಾರ(ಮಾ.13) ನಡೆದಿದೆ.
ಕಾರು ಗುದ್ದಿದ ರಭಸಕ್ಕೆ ಮಹಿಳೆ ಮೇಲಕ್ಕೆ ಎಸೆಯಲ್ಪಟ್ಟು ಕಾಂಪೌಂಡ್ ಮೇಲೆ ನೇತಾಡಿದ್ದು, ಘಟನೆಯಲ್ಲಿ ಮಹಿಳೆಯ ಕಾಲಿಗೆ ಗಂಭೀರ ಗಾಯವಾಗಿದೆ, ಆರೋಪಿ ಕಾರು ಚಾಲಕ ಸತೀಶ್ ವಿರುದ್ಧ ಹಿಟ್ ಅಂಡ್ ರನ್ ಕೇಸ್ ದಾಖಲಾಗಿದೆ.
ಆರೋಪಿ ಸತೀಶ್ ತನ್ನ ನೆರೆಮನೆಯ ಮುರಳಿ ಪ್ರಸಾದ್ ಜೊತೆಗೆ ವೈಷಮ್ಯ ಹೊಂದಿದ್ದು ಅದರಂತೆ ಕಾರು ಡಿಕ್ಕಿ ಹೊಡೆಸಿ ಮುರಳಿ ಪ್ರಸಾದ್ ಹತ್ಯೆ ನಡೆಸುವ ಉದ್ದೇಶವನ್ನು ಆರೋಪಿ ಸತೀಶ್ ಹೊಂದಿದ್ದ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಮೇಲಕ್ಕೆ ಎಸೆಯಲ್ಪಟ್ಟು ಪಕ್ಕದ ಮನೆಯ ಕಾಂಪೌಂಡ್ ಮೇಲೆ ಸಿಲುಕಿ ನೇತಾಡಿದ್ದು ಕೂಡಲೇ ಅಕ್ಕಪಕ್ಕದ ಜನ ಸೇರಿ ಕಾಂಪೌಂಡ್ ನಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
#Mangalore #accident at #kapikad, Speeding Car Crashes into Cyclist, Woman Thrown Against Wall in Attempted #Murder Case pic.twitter.com/SozBtHgpaA
— Headline Karnataka (@hknewsonline) March 13, 2025
ಇದನ್ನೂ ಓದಿ:ಮಕ್ಕಳು ಆಡುವಾಗ ಸಿಕ್ಕ ಸೂಟ್ ಕೇಸ್ ನಲ್ಲಿ ಮಹಿಳೆಯ ರುಂಡ ಪತ್ತೆ..! ದೇಹಕ್ಕಾಗಿ ಪೊಲೀಸರ ಹುಡುಕಾಟ..!
ಘಟನೆ ಬಳಿಕ ಸತೀಶ್ ಸ್ಥಳದಿಂದ ಪರಾರಿಯಾಗಿದ್ದು, ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಪಶ್ಚಿಮ ಸಂಚಾರಿ ಠಾಣೆಯಲ್ಲಿ ಹಿಟ್ ಅಂಡ್ ರನ್ ದೂರು ದಾಖಲಾಗಿದೆ.
2023 ರಲ್ಲಿ ಮುರಳಿ ಪ್ರಸಾದ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸತೀಶ್ ಅವರ ತಂದೆಗೆ ಡಿಕ್ಕಿ ಹೊಡೆದು ಕಿರಿಕ್ ಮಾಡಿದ್ದ ಎನ್ನಲಾಗಿದೆ ಇದೇ ಕಾರಣಕ್ಕೆ ಮುರಳಿ ಪ್ರಸಾದ್ ಮೇಲೆ ದ್ವೇಷ ಸಾಧಿಸಲು ಸತೀಶ್ ಈ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಅದು ತಪ್ಪಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಗುದ್ದಿರಬಹುದು ಎಂದು ಶಂಕಿಸಲಾಗಿದೆ.