ಕರಾವಳಿ

ಮಂಗಳೂರು: ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದಿಂದ ಶ್ರದ್ದಾಂಜಲಿ ಸಭೆ

293

ನ್ಯೂಸ್ ನಾಟೌಟ್: ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ) ಮಂಗಳೂರು ಇದರ ಮಹಿಳಾ ಘಟಕ ಹಾಗೂ ಯುವ ಘಟಕದ ಆಶ್ರಯದಲ್ಲಿ ದಿವಂಗತ ವಾಸುದೇವ ಗೌಡ ಪಡ್ಪು ಅವರಿಗೆ ಶ್ರದ್ದಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಮಂಗಳೂರಿನ ಒಕ್ಕಲಿಗರ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಗುರುದೇವ ಯು ಬಿ ವಹಿಸಿದ್ದರು.

ಕಾರ್ಯದರ್ಶಿ ಡಿ ಬಿ ಬಾಲಕೃಷ್ಣ ಸ್ವಾಗತಿಸಿದರು. ವಾಸುದೇವ ಪಡ್ಪು ಸಂಘಕ್ಕೆ ನೀಡಿದಂತಹ ಕೊಡುಗೆ ಸಂಘದ ಕಟ್ಟಡ ಕಟ್ಟುವಲ್ಲಿನ ಪರಿಶ್ರಮ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತ್ತು ಅವರ ಒಡನಾಟವನ್ನು ಲೋಕಯ್ಯ ಗೌಡ ಸ್ಮರಿಸಿದರು. ಉಪಾಧ್ಯಕ್ಷ ಪುರುಷೋತ್ತಮ ಕೆ.ವಿ ಚಿರಶಾಂತಿ ಕೋರಿದರು.

ಯುವ ಘಟಕದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಅಗಲಿದ ಹಿರಿಯರ ನೆನಪನ್ನು ಸ್ಮರಿಸಿದರು. ಜತೆ ಕಾರ್ಯದರ್ಶಿ ರಾಮಚಂದ್ರ ಕೆ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ನಿರ್ದೇಶಕರು, ಮಹಿಳಾ ಘಟಕದ ಕಾರ್ಯದರ್ಶಿ ಸಾರಿಕಾ ಸುರೇಶ್ , ಮಹಿಳಾ ಘಟಕದ ಸದಸ್ಯರು ಮತ್ತು ಯುವ ಘಟಕದ ಕಾರ್ಯದರ್ಶಿ ಕಿರಣ್ ಹೊಸಳಿಕೆ, ಯುವ ಘಟಕದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

See also  ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ತೆಗೆದಿಟ್ಟಿದ್ದ ಹಣದಲ್ಲಿ ಬಡವರಿಗೆ 14 ಮನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget