ಕರಾವಳಿ

ಮಂಗಳೂರು:ಇ-ಸಿಗರೇಟ್ ಮತ್ತು ವಿದೇಶಿ ಸಿಗರೇಟ್ ಮಾರಾಟ – ಐವರ ಬಂಧನ

386

ನ್ಯೂಸ್ ನಾಟೌಟ್ :  ಕೇಂದ್ರ ಸರಕಾರವು ನಿರ್ಭಂಧಿಸಿರುವ ಇ-ಸಿಗರೇಟ್ ಗಳನ್ನು ಮಾರಾಟ ಮಾಡುತ್ತಿದ್ದ ಐದು ಮಂದಿಯನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಅಂದಾಜು 6.80 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ರೆಹಮುತ್ತುಲ್ಲಾ, ಸಂತೋಷ, ಶಿವು@ಶಿವಾನಂದ, ಹಸನ್ ಷರೀಫ್, ಇರ್ಷಾದ್ ಎಂದು ಗುರುತಿಸಲಾಗಿದೆ.ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಕೇಂದ್ರ ಉಪ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್ ಬಾಗ್ ನಲ್ಲಿರುವ ಸಾಯಿಬಿನ್ ಕಾಂಪ್ಲೆಕ್ಸ್ ನಲ್ಲಿ ಕೇಂದ್ರ ಸರಕಾರವು ನಿರ್ಭಂಧಿಸಿರುವ ಇ-ಸಿಗರೇಟ್ ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ.

ಸಾಯಿಬಿನ್ ಕಾಂಪ್ಲೆಕ್ಸ್ ನಲ್ಲಿನ ಅಮಂತ್ರಣ ಶಾಪ್,ಫ್ಯಾಂಟ್ಯಾಸ್ಟಿಕ್ ವರ್ಲ್ಡ್, ಯುನಿಕ್ ವರ್ಲ್ಡ್, ಡೂ ಇಟ್, ಫ್ಯಾಂಟ್ಯಾಸ್ಟಿಕ್ ಶಾಫ್ ,ವೆಂಚರ್ ಅಂಗಡಿಗಳ ಮೇಲೆ ದಾಳಿ ಮಾಡಿ ಒಟ್ಟು 1,50,000/- ಮಾಲ್ಯದ 273 ಇ-ಸಿಗರೇಟ್ ಗಳನ್ನು ವಶಪಡಿಸಿ ಕೊಂಡಿದ್ದಾರೆ. ಮತ್ತು ಕೊಟ್ಟಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಒಟ್ಟು 5,30,000/- ಮೌಲ್ಯದ ಎಚ್ಚರಿಕೆಯ ಚಿಹ್ನೆಯನ್ನು ಅಳವಡಿಸದ ವಿವಿಧ ವಿದೇಶಿ ಕಂಪನಿಗಳ ಸಿಗರೇಟ್ ತುಂಬಿರುವ ಪ್ಯಾಕ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಸ್ವಾಧೀನಪಡಿಸಿಕೊಂಡ ಇ-ಸಿಗರೇಟ್ ಮತ್ತು ವಿದೇಶಿ ಸಿಗರೇಟ್ ಗಳ ಒಟ್ಟು ಮೊತ್ತ 6,80,000/- ಆಗಿರುತ್ತದೆ.ಬರ್ಕೆ ಪೊಲೀಸ್ ಠಾಣೆಯಲ್ಲಿ ಎಲೆಕ್ಟ್ರಾನಿಕ್ ಸೀಗರೇಟ್ ನಿಷೇಧ ಕಾಯ್ದೆ-2019 ಹಾಗೂ ಕೊಟ್ಟಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

See also  ಹಳದಿ ರೋಗದಿಂದ ಅಡಿಕೆ ಬೆಳೆಗಾರರಿಗೆ ಭವಿಷ್ಯವಿಲ್ಲದಂತಾಗಿದೆ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget