ಕರಾವಳಿಕಾಸರಗೋಡುಕ್ರೈಂಮಂಗಳೂರು

ಮಂಗಳೂರು: ಚಿಕಿತ್ಸೆಗೆ ದಾಖಲಾಗಿದ್ದ ಮಹಿಳಾ ರೋಗಿ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರ..! ಬಲವಂತವಾಗಿ ಮಹಿಳೆಯ ಬಟ್ಟೆಗಳನ್ನು ಬಿಚ್ಚಿ ಫೋಟೋ ಕ್ಲಿಕ್ಕಿಸಿದವ ಅರೆಸ್ಟ್

ನ್ಯೂಸ್ ನಾಟೌಟ್: ಮಹಿಳಾ ರೋಗಿಯೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲೇ ಅತ್ಯಾಚಾರ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಾರ್ಚ್ 13 ರಂದು ದುರ್ಘಟನೆ ಸಂಭವಿಸಿದೆ. ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಕೇರಳ ಹೊಸದುರ್ಗ ಪುಲ್ಲೂರು ಗ್ರಾಮದ ನಿವಾಸಿ ಸುಜಿತ್ ಬಂಧಿತ ಆರೋಪಿ ಎನ್ನಲಾಗಿದೆ.

ಮಾರ್ಚ್ 13 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸಂತ್ರಸ್ತ ಮಹಿಳೆ ದಾಖಲಾಗಿದ್ದರು. ಈ ವೇಳೆ ಸ್ನೇಹಿತ ಸುಜಿತ್ ಎಂಬ ವ್ಯಕ್ತಿ ಜೊತೆಯಲ್ಲಿ ಬಂದಿದ್ದ. ಸಹಾಯ ಮಾಡುವ ನೆಪದಲ್ಲಿ ಆಸ್ಪತ್ರೆಯ ಕೊಠಡಿಯಲ್ಲಿ ಆಕೆಯೊಂದಿಗೆ ತಂಗಿದ್ದ. ಈ ವೇಳೆ ಅತ್ಯಾಚಾರ ನಡೆಸಿ ಮಹಿಳೆಯ ನಗ್ನ ಫೋಟೋಗಳನ್ನು ಅಂದು ಆತ ಚಿತ್ರೀಕರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈಕೆಯ ಫೋಟೋವನ್ನು ಬಳಸಿಕೊಂಡು ಆತ ಬ್ಲ್ಯಾಕ್ ಮೇಲ್ ಮಾಡಿ ಮತ್ತೆ..ಮತ್ತೆ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ಆ ಘಟನೆಯ ಬಳಿಕ ಹಲವು ಸಲ ಆಕೆಯ ಮೇಲೆ ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿ ವಿರುದ್ಧ ಸೆಕ್ಷನ್ 376, 506, 149 ಪ್ರಕಾರ ದೂರು ದಾಖಲಿಸಿರುವ ಕದ್ರಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Related posts

ಅಂತರ್ಜಾತಿ ವಿವಾಹವಾದ್ರೆ ಸರ್ಕಾರದಿಂದ ಎಷ್ಟು ಹಣ ಸಿಗುತ್ತೆ ಗೊತ್ತಾ..? ಕಳೆದ 5 ವರ್ಷಗಳಲ್ಲಿ ಸಲ್ಲಿಕೆಯಾದ ಅರ್ಜಿಗಳೆಷ್ಟು? ಈ ಬಾರಿ ಕೊರತೆಯಾದದ್ದೇಕೆ?

ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಮತ್ತೊಂದು ಆಘಾತ

ಬ್ರೈನ್ ಎಮರೇಜ್‌ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ರಿಕ್ಷಾ ಚಾಲಕ, ಚಿಕಿತ್ಸೆ ಫಲಿಸದೆ ಸಾವು