ಕರಾವಳಿ

ಮಂಗಳೂರಿನ ಐಡಿಯಲ್ ಪಬ್ಬಾಸ್​ನ ಗಡ್‌ಬಡ್‌ ಐಸ್ ಕ್ರೀಮ್​​ಗೆ ವಿಶ್ವಮಾನ್ಯತೆ, ವಿಶ್ವದ 100 ರುಚಿಕರ ಐಸ್ ಕ್ರೀಮ್‌ಗಳ ಪಟ್ಟಿಯಲ್ಲಿ ಸ್ಥಾನ

ನ್ಯೂಸ್ ನಾಟೌಟ್: ಐಸ್ ಕ್ರೀಮ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ದೊಡ್ಡವರಿಂದ ಹಿಡಿದು ಎಳೆ ಮಕ್ಕಳ ತನಕ ಎಲ್ಲರಿಗೂ ಐಸ್ ಕ್ರೀಂ ಅಂದ್ರೆ ಪಂಚ ಪ್ರಾಣ. ಕರಾವಳಿಯಲ್ಲೂ ಐಸ್ ಕ್ರೀಂ ಪ್ರಿಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಮಂಗಳೂರಿಗೆ ಭೇಟಿ ನೀಡಿದವರು ಹೆಚ್ಚಾಗಿ ಪಬ್ಬಾಸ್ ಐಸ್‌ ಕ್ರೀಂ ಗೆ ಭೇಟಿ ನೀಡದೆ ಇರುವುದಿಲ್ಲ. ಅಂತಹ ಪಬ್ಬಾಸ್ ಐಸ್ ಕ್ರೀಂಗೆ ಈಗ ವಿಶ್ವಮಾನ್ಯತೆ ಸಿಕ್ಕಿದೆ.

ಹೌದು, ಇಲ್ಲಿನ ಐಡಿಯಲ್ ಸಂಸ್ಥೆಯ ಗಡ್ ಬಡ್ ಐಸ್ ಕ್ರೀಮ್ ​​ಗೆ ವಿಶ್ವಮಾನ್ಯತೆ ದೊರಕಿದೆ. ಜಗತ್ತಿನ ನೂರು ಐಕಾನಿಕ್ ಐಸ್ ಕ್ರೀಮ್‌ಗಳ ಪಟ್ಟಿಗೆ ಸೇರ್ಪಡೆ ಆಗಿದೆ.

ಮಂಗಳೂರಿನಲ್ಲಿ ಮನ ಸೆಳೆಯುವ ಆಕರ್ಷಕ ಕಡಲ ಕಿನಾರೆಯಿದೆ. ಇಲ್ಲಿ ಕುಳಿತು ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವುದೇ ಪರಮಾನಂದ. ಜತೆಗೆ ಐಸ್ ಕ್ರೀಂ ಕೂಡ ಇದ್ದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ..? ಅಂತಹ ಪ್ರವಾಸ ಪ್ರಿಯರು ಯೋಚಿಸುತ್ತಿರಬಹುದು.

ಇದೀಗ ಐಸ್ ಕ್ರೀಂ ನಿಂದಲೇ ಮಂಗಳೂರು ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣ ಪಬ್ಬಾಸ್ ಐಡಿಯಲ್ ಐಸ್ ಕ್ರೀಂ ಅನ್ನುವುದು ವಿಶೇಷ. ಮಂಗಳೂರು ಅಂದಕೂಡಲೇ ಥಟ್ ಅಂತ ನೆನಪಾಗೋದೇ ಗಡ್ಬಡ್ ಐಸ್ ಕ್ರೀಮ್. ಐಡಿಯಲ್-ಪಬ್ಬಾಸ್‌ನ ಗಡ್‌ಬಡ್ ಮಂಗಳೂರಿನ ಸಿಗ್ನೇಚರ್ ಬ್ರ್ಯಾಂಡ್. ಮಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರು ಐಡಿಯಲ್​ನ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್​ಗೆ ತೆರಳಿ ಐಸ್ ಕ್ರೀಮ್ ಸವಿಯದೆ ಹೋಗುವುದೇ ಕಡಿಮೆ. ಅಷ್ಟರ ಮಟ್ಟಿಗೆ ಅದರ ಖ್ಯಾತಿ ಜಗದಗಲ ಹಬ್ಬಿದೆ.. ಈಗ ಇದೇ ಐಕಾನಿಕ್ ಪ್ರಾಡಕ್ಟ್, ವಿಶ್ವದ 100 ರುಚಿಕರ ಐಸ್ ಕ್ರೀಮ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವುದು ವಿಶೇಷ.

ಮಂಗಳೂರಿನವರಿಗೆ ಐಡಿಯಲ್ ಮತ್ತು ಪಬ್ಬಾಸ್‌ನ ಐಸ್ ಕ್ರೀಂ ರುಚಿ ದೇಶದೆಲ್ಲೆಡೆ ಪರಿಚಿತ ಆಗಿದೆ.. ಮುಂಬೈ, ಗೋವಾ ಸಹಿತ ಇನ್ನಿತರ ಪ್ರದೇಶದಿಂದ ನಿತ್ಯ ಮಂಗಳೂರಿಗೆ ಬರುವ ಪ್ರವಾಸಿಗರು ಆಗಮಿಸಿ ಗಡ್‌ಬಡ್ ರುಚಿಯನ್ನ ಆಸ್ವಾದಿಸುತ್ತಾರೆ.. ಪ್ರಸ್ತುತ ಐಕಾನಿಕ್ ಐಸ್‌ಕ್ರೀಮ್‌ಗಳ ಪಟ್ಟಿಯಲ್ಲಿ ಗಡ್‌ಬಡ್‌ಗೆ ವಿಶ್ವಮಾನ್ಯತೆ ಲಭಿಸಿರುವುದು ಮಂಗಳೂರೀನ ಖ್ಯಾತಿಗೆ ಮತ್ತೊಂದು ಹೆಮ್ಮೆಯ ಗರಿ‌ ಸೇರಿಸಿದೆ.

ಮಂಗಳೂರಿನ ಐಡಿಯಲ್ ಸಂಸ್ಥೆಯನ್ನ 1975ರಲ್ಲಿ ಪ್ರಭಾಕರ ಕಾಮತ್ ಆರಂಭಿಸಿದ್ದರು. ಆರಂಭದ ಕೆಲ ತಿಂಗಳಲ್ಲಿ ಗಡ್‌ಬಡ್ ಐಸ್ ಕ್ರೀಂ ತಯಾರಿಸಲಾಯಿತು. ಮಂಗಳೂರಿನ ಐಡಿಯಲ್ ಮತ್ತು ಪಬ್ಬಾಸ್‌ನಲ್ಲಿ ತಯಾರಾಗುವ ಗಡ್ಬಡ್ ಐಸ್‌ಕ್ರೀಂ ಹಣ್ಣುಗಳು, ನಟ್ಸ್ ಮತ್ತು ಸಿರಪ್‌ಗಳ ಮಿಶ್ರಣ, ಕೇಸರಿ, ಐಸ್ ಕ್ರೀಮ್, ಜೆಲ್ಲಿ, ವಿವಿಧ ಬಗೆಯ ನಟ್ಸ್‌ಗಳು, ಸ್ಟ್ರಾಬೆರಿ ಐಸ್ ಕ್ರೀಂ, ವಿವಿಧ ಬಗೆಯ ಹಣ್ಣಿನ ತುಂಡುಗಳು, ವೆನಿಲ್ಲಾ ಐಸ್ ಕ್ರೀಮ್‌ಗಳನ್ನ ಒಳಗೊಂಡಿದೆ. 48 ವರ್ಷಗಳಿಂದ ಗಡ್‌ಬಡ್ ಗುಣಮಟ್ಟವನ್ನ ಜನರ ಅಭಿರುಚಿಗೆ ತಕ್ಕಂತೆ ಉತ್ತಮ ಪಡಿಸಲಾಗಿದೆ.. ಈ ಕಾರಣ, ಇಂದು ಗಡ್‌ಬಡ್ ಐಕಾನಿಕ್ ಪ್ರಾಡಕ್ಟ್ ಆಗಿದೆ.

Related posts

ಸುಳ್ಯ: ಬೈಕ್, ಕಾರು ಮತ್ತು ಬಸ್ ನಡುವೆ ಸರಣಿ ಅಪಘಾತ..! ಗಾಯಾಳು ಆಸ್ಪತ್ರೆಗೆ ದಾಖಲು..!

ಅರಂತೋಡು: ಮಹಿಳೆಯ ವೇಷ ಧರಿಸಿ ರಾತ್ರಿ ಹೊತ್ತು ತಿರುಗಾಡುತ್ತಿದ್ದ ಯುವಕ

ನಿಲ್ಲಿಸಿದ್ದ ಪಿಕಪ್‌ ಕಳವು ಪ್ರಕರಣ,8 ಮಂದಿ ಖತರ್ನಾಕ್ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು..!