ಕರಾವಳಿ

ಮುಸ್ಲಿಂ ಯುವಕನಿಗೆ ಹಿಂದೂ ಯುವಕರ ತಂಡದಿಂದ ಹಿಗ್ಗಾಮುಗ್ಗಾ ಹಲ್ಲೆ

322

ನ್ಯೂಸ್ ನಾಟೌಟ್: ಹಿಂದೂ ಸಂಘಟನೆಯ ಯುವಕರು ಮುಸ್ಲಿಂ ಯುವಕನೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮುಲ್ಲರಪಟ್ಣ ನಿವಾಸಿ ಇಸಾಕ್ ಹಲ್ಲೆಗೊಳಗಾದವರು. ಇಸಾಕ್‌ನ ಮುಖ, ಕಣ್ಣು , ಬೆನ್ನಿನ ತುಂಬಾ ಗಾಯಗಳಾಗಿವೆ. ಆತನಿಗೆ ಚೆನ್ನಾಗಿ ಥಳಿಸಲಾಗಿದ್ದು ಮೈತುಂಬಾ ಬರೆಗಳಾಗಿವೆ. ಬಸ್‌ನಲ್ಲಿ ಹೆಚ್ಚು ರಶ್ ಇದ್ದುದರಿಂದ ಮಹಿಳೆಯೊಬ್ಬರು ಇಸಾಕ್‌ಗೆ ಬ್ಯಾಗ್ ಕೊಟ್ಟರು. ಇದನ್ನು ನೋಡಿದ ಕೆಲವು ಯುವಕರು ಇಸಾಕ್‌ನನ್ನು ಬಸ್ ನಿಂದ ಕೆಳಕ್ಕೆ ಇಳಿಸಿ ಚೆನ್ನಾಗಿ ಥಳಿಸಿದ್ದಾರೆ ಎಂದು ದೂರು ದಾಖಲಾಗಿದೆ. ಸದ್ಯ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ನಾಲ್ವರು ಆರೋಪಿಗಳ ಶೋಧ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಗಾಯಾಳು ಇಸಾಕ್‌ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

See also  ನೆಲ್ಯಾಡಿ: ಕೃಷಿ ತೋಟಕ್ಕೆ ನುಗ್ಗಿ ಆನೆಗಳ ಉಪಟಳ,ರೈತರಿಗೆ ಅಪಾರ ನಷ್ಟ
  Ad Widget   Ad Widget   Ad Widget   Ad Widget   Ad Widget   Ad Widget   Ad Widget