ಕರಾವಳಿ

ಉಳ್ಳಾಲ: ಕ್ರಿಕೆಟ್ ಬೆಟ್ಟಿಂಗ್ ಗೆ ಅಂಗಡಿ ಮಾಲಕ ಬಲಿ,ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣು

ನ್ಯೂಸ್ ನಾಟೌಟ್: ಕ್ರಿಕೆಟ್ ಬೆಟ್ಟಿಂಗ್ ನಿಂದಾಗಿ ವಿಪರೀತ ಸಾಲ ಮಾಡಿಕೊಂಡಿದ್ದ ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ಮಂಗಳೂರಿನ ಉಳ್ಳಾಲ ಎಂಬಲ್ಲಿಂದ ವರದಿಯಾಗಿದೆ. ಹೊಲಿಗೆ ಸಂಬಂಧಿತ ಮಳಿಗೆಯೊಂದರ ಮಾಲಕ ತನ್ನ ಅಂಗಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪ್ರವೀಣ್ ಆಳ್ವ ಮೃತ ದುರ್ದೈವಿ.

ಮೂಲತಃ ಸೇವಂತಿಗುಡ್ಡೆ ನಿವಾಸಿಯಾಗಿದ್ದ ಪ್ರಸ್ತುತ ಕನೀರುತೋಟದಲ್ಲಿ ವಾಸಿಸುತ್ತಿರುವ ಪ್ರವೀಣ್ ಆಳ್ವ ಅವರು ತೊಕ್ಕೊಟ್ಟು ಜಂಕ್ಷನ್ ಬಳಿ ಟೈಲರ್ ಗಳಿಗೆ ಸಂಬಂಧಿಸಿದ ಹೊಲಿಗೆ ನೂಲು ಸೇರಿದಂತೆ ಇತರ ಕಚ್ಚಾ ವಸ್ತುಗಳನ್ನು ಪೂರೈಸುವ ಅಂಗಡಿಯನ್ನು ಕಳೆದ ಏಳೆಂಟು ವರ್ಷಗಳಿಂದ ನಡೆಸುತ್ತಿದ್ದರು.ಘಟನಾ ಸ್ಥಳದಲ್ಲಿ ಪ್ರವೀಣ್ ಅವರು ಬರೆದಿರುವ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ನನ್ನ ಸಾಲಕ್ಕೆ ನಾನೇ ಕಾರಣ, ಅಮ್ಮ, ಪತ್ನಿ , ಮಗನಲ್ಲಿ ಸಾರಿ ಅಂತ ಉಲ್ಲೇಖಿಸಿದ್ದಾರೆ.

ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಅವರು ಬೆಳಗ್ಗೆ ಮನೆಯಿಂದ ಹೊರಟಿದ್ದು, ಅಂಗಡಿಯೊಳಗೆ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಪ್ರವೀಣ್ ಅವರು ಕ್ರಿಕೆಟ್ ಬೆಟ್ಟಿಂಗಲ್ಲಿ ತೊಡಗಿದ್ದು ನಿನ್ನೆ ರಾತ್ರಿಯ ಐಪಿಎಲ್ ಪಂದ್ಯದಲ್ಲಿ ಸೋಲುಂಡಿದ್ದು ಆತ್ಮಹತ್ಯೆ ನಿರ್ಧಾರ ಕೈಗೊಂಡಿರಬಹುದೆಂದು ಸ್ಥಳೀಯರೊಬ್ಬರು ಶಂಕಿಸಿದ್ದಾರೆ.ಮೃತರು ತಾಯಿ , ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸುಳ್ಯ: ಮತ್ತೆ ಮುಂದುವರಿದ ಚಿರತೆ ಹಾವಳಿ,ಜನವಸತಿ ಪ್ರದೇಶದಲ್ಲಿಯೇ ಬಿಂದಾಸ್ ಓಡಾಟ..!ಶರವೇಗದಲ್ಲಿ ಓಡಿ ಸಾಕು ನಾಯಿ,ದನಗಳನ್ನೂ ಬೇಟೆಯಾಡಿದ ಚೀತಾ..!

ದೀಪಾವಳಿ- ದೀಪಗಳ ಹಬ್ಬ-; ಮನೆ ಮನ ಬೆಳಗುವ ಹಬ್ಬ

ಕೊತ್ತಲಿಗೆ ಕ್ರಿಕೆಟ್‌ ಆಡುವ ತಂಡಗಳಿಗೆ ಸುವರ್ಣಾವಕಾಶ