ಕರಾವಳಿಕೊಡಗು

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರ ಪುನರಾರಂಭ, ಗಂಟೆ ಗಟ್ಟಲೆ ಕಾದು ಸುಸ್ತಾಗಿದ್ದ ಪ್ರಯಾಣಿಕರಿಗೆ ಬಿಗ್ ರಿಲೀಫ್‌..!

ನ್ಯೂಸ್ ನಾಟೌಟ್: ಮದೆನಾಡು ಸಮೀಪದ ಕರ್ತೊಜಿಯಲ್ಲಿ ಮರ ಸಹಿತ ಭೂಕುಸಿತವಾಗಿದ್ದು ಬಂದ್‌ ಆಗಿದ್ದ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಇದೀಗ ರಸ್ತೆಗೆ ಅಡ್ಡವಾಗಿ ಬಿದ್ದ ಮರ ಮತ್ತು ಮಣ್ಣನ್ನು ಜೆಸಿಬಿ ಯಂತ್ರ ಬಳಸಿ ತೆರವುಗೊಳಿಸಲಾಗಿದೆ. ಇದರಿಂದ ಕಳೆದ ಎರಡು ಗಂಟೆಯಿಂದ ಬಂದ್‌ ಆಗಿದ್ದ ಹೆದ್ದಾರಿಯಲ್ಲಿ ವಾಹನ ಸಂಚಾರ ಪುನರಾರಂಭಗೊಂಡಿದೆ.

ಮರಸಹಿತ ಮಣ್ಣು ಬಿದ್ದು ರಸ್ತೆ ಬಂದ್‌ ಆದ ಕಾರಣ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಪಾಜೆಯ ಗಡಿಕಲ್ಲು ತನಕ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದು ಫುಲ್ ರಶ್ ಆಗಿತ್ತು. ಇದೀಗ ತೆರವಾದ ಕಾರಣ ವಾಹನ ಸಂಚಾರ ಮತ್ತೆ ಆರಂಭಗೊಂಡಿದೆ. ಆದರೆ ಈ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಮತ್ತೆ ಭೂಕುಸಿತ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Related posts

ಕೊಡಗು: ಬಿಜೆಪಿ ಕಾರ್ಯಕರ್ತನ ಸಾವು ಪ್ರಕರಣ..! ಯದುವೀರ್ ಸೇರಿ ಹಲವು ಬಿಜೆಪಿ ಮುಖಂಡರಿಂದ ಪ್ರತಿಭಟನೆ..! ನಿಷೇಧಾಜ್ಞೆ ಜಾರಿ

ಅರೆರೇ…ಈ ಮಹಿಳೆಯ ನಾಲಿಗೆಯಲ್ಲಿ ಕೂದಲು..!, ಕೂದಲಿಗೆ ಕಾರಣವಾಗಿದ್ದು ಏನು?

‘ಕಾಂಗ್ರೆಸ್ ನಾಯಕರೇ ನಿಮಗೆ10 ಕೆ.ಜಿ ಅಕ್ಕಿ ಕೊಡಲು ಆಗದಿದ್ದರೆ ಕ್ಷಮೆ ಕೇಳಿ’ ಕೋಟ ಶ್ರೀನಿವಾಸ್ ಪೂಜಾರಿ ಆಗ್ರಹ