ಕ್ರೈಂ

ಮಂಗಳೂರು: ಲಿವರ್ ದಾನ ಮಾಡಿ ಪ್ರಾಣ ಕಳೆದುಕೊಂಡ ಮಹಿಳೆ, ಮೂರು ದಿನಗಳ ವಿಶ್ರಾಂತಿಯಲ್ಲಿದ್ದವರಿಗೆ ಆಗಿದ್ದೇನು..?

ನ್ಯೂಸ್ ನಾಟೌಟ್: ಲಿವರ್ ದಾನ ಮಾಡಿದ ಮಹಿಳೆಯೊಬ್ಬರು ಮೂರು ದಿನಗಳ ವಿಶ್ರಾಂತಿಯಲ್ಲಿರುವಾಗಲೇ ಪ್ರಾಣ ಕಳೆದುಕೊಂಡ ಕರುಣಾಜನಕ ಘಟನೆ ನಗರದ ಕರಂಗಲ್ಪಾಡಿಯಿಂದ ವರದಿಯಾಗಿದೆ. ಇಲ್ಲಿನ ನಿವಾಸಿಯಾಗಿರುವ ಲೆಕ್ಕಪರಿಶೋಧಕ ಚೇತನ ಕಾಮತ್ ಅವರ ಪತ್ನಿ ಅರ್ಚನಾ ಕಾಮತ್ (33 ವರ್ಷ) ಮೃತಪಟ್ಟವರು.

ಬಂಧುವೊಬ್ಬರಿಗೆ ತಮ್ಮ ಪಿತ್ತಜನಕಾಂಗವನ್ನು ದಾನ ಮಾಡಿದ್ದರು. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಅವರ ಪಿತ್ತಜನಕಾಂಗವನ್ನು ತೆಗೆದು, ಇನ್ನೊಬ್ಬರಿಗೆ ಕಸಿ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಮೂರು ದಿನಗಳ ವಿಶ್ರಾಂತಿ ಬಳಿಕ ಕರಂಗಲ್ಪಾಡಿಯ ಮನೆಗೆ ಹಿಂತಿರುಗಿದ್ದರು.

ಆ ಬಳಿಕ ಅರ್ಚನಾ ಕಾಮತ್  ಆರೋಗ್ಯ ಏರುಪೇರಾಗಿತ್ತು. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಬಹು ಅಂಗಾಂಗ ವೈಫಲ್ಯದಿಂದ ಅಸುನೀಗಿದ್ದಾರೆ ಎಂದು ಗೊತ್ತಾಗಿದೆ.  ಕರಂಗಲ್ಪಾಡಿಯಲ್ಲಿ ಅಂತಿಮ ವಿಧಿಗಳನ್ನು ಮುಗಿಸಿ ಅವರ ತವರೂರಾದ ಕುಂದಾಪುರದ ಕೋಟೆಶ್ವರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

Related posts

ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ 12 ದಿನಗಳ ಕಾಲ ಅತ್ಯಾಚಾರ..! ಹೊಟೇಲ್ ರೂಮ್ ನಲ್ಲಿ ಕೂಡಿ ಹಾಕಿದ್ದ ಆರೋಪಿಗಳು..!

ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಹತ್ಯೆಯಾದದ್ದೇಕೆ..? ಅಶ್ಲೀಲ ವಿಡಿಯೋ ಹರಿಬಿಡುತ್ತಿದ್ದ ಈಕೆ ಯಾರು..?

ದುಬಾರಿ ಮೀನು ಕಳ್ಳರ ಕೈ ಸೇರಿದ್ದೇಗೆ..? ಬರೋಬ್ಬರಿ 4.5 ಕೋಟಿ ರೂ. ಮೌಲ್ಯದ ಆ ಮೀನು ಯಾವುದು..? ಇಲ್ಲಿದೆ ರೋಚಕ ಸ್ಟೋರಿ