ಕರಾವಳಿ

ಮಂಗಳೂರು: ಸುಳ್ಯ ಮೂಲದ ಮಹಿಳೆ ಮೂರು ವರ್ಷದ ಮಗು ಸಹಿತ ನಾಪತ್ತೆ;ಮಹಿಳೆ ಬರೆದಿಟ್ಟ ಚೀಟಿ ಪತ್ತೆ..!

ನ್ಯೂಸ್ ನಾಟೌಟ್ :ತಾಯಿ ಹಾಗೂ ತನ್ನ ಮೂರು ವರ್ಷದ ಪುತ್ರ ನಾಪತ್ತೆಯಾಗಿರುವ ಘಟನೆ ಮಂಗಳೂರಿನ ಬಜ್ಪೆ ಠಾಣಾ ವ್ಯಾಪ್ತಿಯಿಂದ ವರದಿಯಾಗಿದೆ. ಬಜ್ಪೆಯ ಕೆ.ಪಿ. ನಗರದ ಶಾಹಿಸ್ತಾ ಮಂಜೀಲ್‌ನ ಅಹ್ಮದ್‌ ಮಕ್ಸೂದ್‌ ಅವರ ಪತ್ನಿ ಶರೀನಾ ವೈ. (24) ಮತ್ತು ಮಗ ಮಹ್ಮದ್‌ ತೋಹಾರ್‌ (3) ಡಿ. 11ರಂದು ರಾತ್ರಿ ಕಾಣೆಯಾದ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪತಿ ಅಹ್ಮದ್‌ ಮಕ್ಸೂದ್‌ ಅವರು ತಾಯಿ ಮತ್ತು ಪತ್ನಿಯೊಂದಿಗೆ ವಾಸವಾಗಿದ್ದರು.ಇವರಿಗೆ ಸುಮಾರು 6 ವರ್ಷಗಳ ಹಿಂದೆ ಸುಳ್ಯದ ಶರೀನಾ (24) ಅವರನ್ನು ವಿವಾಹವಾಗಿದ್ದರು. ದಂಪತಿಗೆ 3 ವರ್ಷದ ಗಂಡು ಮಗುವಿದ್ದು, ಶರೀನಾ ಈಗ 5 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ.ದಂಪತಿ ಅನ್ಯೋನ್ಯವಾಗಿದ್ದರೆಂದು ತಿಳಿದು ಬಂದಿದೆ.ಈ ನಡುವೆ ಡಿ. 11ರಂದು ರಾತ್ರಿ ಎಲ್ಲರೂ ಮಲಗಿರುವ ವೇಳೆ ಮಧ್ಯರಾತ್ರಿ ಸರಿಸುಮಾರು 2.45ರ ಸುಮಾರಿಗೆ ಶರೀನಾ ಪುತ್ರನೊಂದಿಗೆ ಮನೆ ಬಿಟ್ಟು ಹೋಗಿದ್ದಾರೆಂದು ತಿಳಿದು ಬಂದಿದೆ.ಮರುದಿನ ಬೆಳಗ್ಗೆ ಮನೆಯಲ್ಲಿ ಹುಡುಕಾಡಿದಾಗ ಇವರಿಬ್ಬರು ಇಲ್ಲದಿರುವುದನ್ನು ಕಂಡು ಮನೆಯ ಎದುರಿನ ಸಿಸಿ ಕ್ಯಾಮರಾ ಪರಿಶೀಲಿಸಿದ್ದಾರೆ. ಆಗ ಅವರಿಬ್ಬರು ಮನೆ ಬಿಟ್ಟು ಹೋಗಿರೋದು ದೃಢಪಟ್ಟಿದೆ.

ಶರೀನಾ ಚೀಟಿಯನ್ನು ಬರೆದು ಹೋಗಿದ್ದು ಅದರಲ್ಲಿ ತಾನು ತಾಯಿ ಮನೆಗೆ ಹೋಗುವುದಾಗಿ ತಿಳಿಸಿದ್ದಾರೆ. ಆದರೆ ತಾಯಿಗೆ ಫೋನ್ ಮಾಡಿ ವಿಚಾರಿಸಿದಾಗ ಇಲ್ಲಿಗೆ ಬಂದಿಲ್ಲವೆಂದು ಹೇಳಿದ್ದಾರೆ.ಗಾಬರಿಯಾದ ಮನೆಯವರು ಅವರನ್ನು ಸುತ್ತಲೂ ಹುಡುಕಾಡಿದ್ದಾರೆ.ಎಲ್ಲೂ ಪತ್ತೆಯಾಗಿಲ್ಲವೆಂದು ತಿಳಿದು ಬಂದಿದೆ. ಶರೀನಾ ಬಟ್ಟೆಬರೆ ಜತೆಗೆ 5 ಗ್ರಾಂ ಚಿನ್ನದ ಆಭರಣ ತೆಗೆದುಕೊಂಡು ಹೋಗಿರುವುದಾಗಿಯೂ ತಿಳಿದು ಬಂದಿದೆ. ಆಕೆ ಪತಿ ಅಹ್ಮದ್‌ ಮಕ್ಸೂದ್‌ ಡಿ. 13ರಂದು ಬಜ್ಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Related posts

ಸೋಮನಾಥೇಶ್ವರ ದೇವಸ್ಥಾನಕ್ಕೆ ಗೂನಡ್ಕದಿಂದ ಕೊಡಿಮರ

ಹಿಂದೂ ಯುವತಿ-ಮುಸ್ಲಿಂ ಯುವಕನಿದ್ದ ಕಾರಿನ ಮೇಲೆ ಹಿಂದೂ ಕಾರ್ಯಕರ್ತರ ದಾಳಿ

ಶಾಲಾ ಮಕ್ಕಳಲ್ಲಿ ಕೆಂಗಣ್ಣು ಕಾಣಿಸಿಕೊಂಡರೆ ರಜೆ ಕೊಡಿ