ಕರಾವಳಿಕ್ರೈಂ

ಮಾರಕ ಆಯುಧಗಳೊಂದಿಗೆ ಮಾದಕ ದ್ರವ್ಯ ಮಾರಾಟ ಮಾಡಲು ಬಂದ ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು..! ಬಂಧಿತರಿಂದ 4 ಗ್ರಾಂ ನಿಷೇಧಿತ ಡ್ರಗ್ಸ್ , 3 ಮಾರಕ ಆಯುಧ ವಶಕ್ಕೆ

299

ನ್ಯೂಸ್ ನಾಟೌಟ್: ಮಾರಕ ಆಯುಧಗಳೊಂದಿಗೆ ಮಾದಕ ದ್ರವ್ಯ ಮಾರಾಟ ಮಾಡಲು ಬಂದ ಇಬ್ಬರ ಹೆಡೆಮುರಿ ಕಟ್ಟಿ ಪೊಲೀಸರು ಕಂಬಿಯ ಹಿಂದೆ ತಳ್ಳಿದ್ದಾರೆ. ಬಂಧಿತರಿಂದ 4 ಗ್ರಾಂ ನಿಷೇಧಿತ ಎಂಡಿಎಂಎ ಡ್ರಗ್ಸ್ , 3 ಮಾರಕ ಆಯುಧ ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರಿನ ಕಾವೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಮೂಡುಶೆಡ್ಡೆ ಗ್ರಾಮದ ಮೊಹಮ್ಮದ್ ಶಾರುಖ್ (27 ವರ್ಷ), ಜಗದೀಶ್ (45 ವರ್ಷ) ಎಂದು ಗುರುತಿಸಲಾಗಿದೆ.  ಬಂಧಿತರಿಂದ 1 ಮಾರುತಿ ಸ್ವಿಫ್ಟ್ ಕಾರು, ಹಾಗೂ ಒಟ್ಟು 4, 41,700 ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಜೈನ್  ನಿರ್ದೇಶನದಂತೆ ಮಂಗಳೂರು ನಗರ ಉತ್ತರ  ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಕಾವೂರು ಪೊಲೀಸ್ ನಿರೀಕ್ಷಕರಾದ ಗುರುರಾಜ್, ಪಿಎಸ್ಐ ಮಲ್ಲಿಕಾರ್ಜುನ ಬಿರಾದಾರ ಹಾಗೂ ಸಿಬ್ಬಂದಿ ತಾರಾನಾಥ್, ಕಿಶೋರ್, ಸಂಭಾಜಿ, ಲತೇಶ್ ರವರು ಪಾಲ್ಗೊಂಡಿದ್ದರು.

See also  ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣು..! ಕಾಂಗ್ರೆಸ್ ಸಚಿವರಿಂದ ನನಗೆ ಕಿರುಕುಳ ಎಂದು ಆರೋಪಿಸಿದ್ದು ಯಾರಿಗೆ? ಆಡಿಯೋದಲ್ಲಿ ಏನಿದೆ?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget