ಕ್ರೈಂ

ಮಂಗಳೂರು: ಒಂಟಿ ಬೈಕ್ ಗೆ ಹೊಂಚು ಹಾಕಿ ಸುಲಿಗೆ, ಮಂಗಳಮುಖಿ ಅಂದರ್

180
Spread the love

ಮಂಗಳೂರು: ಒಂಟಿ ದ್ವಿಚಕ್ರ ವಾಹನವನ್ನೇ ಟಾರ್ಗೆಟ್ ಮಾಡಿ ಸವಾರನನ್ನು ಸುಲಿಗೆ‌ ಮಾಡುತ್ತಿದ್ದ ಮಂಗಳಮುಖಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಇಜಿಪುರ ನಿವಾಸಿ ಅಭಿಷೇಕ್ ಅಲಿಯಾಸ್ ಗೊಂಬೆ ಅಲಿಯಾಸ್ ಅನಾಮಿಕ(27) ಬಂಧಿತ ಮಂಗಳಮುಖಿ.

ಮಂಗಳೂರಿನ ನಂತೂರು ಪದವು ಬಳಿಯಿರುವ ಬಿಎಸ್ಎನ್ಎಲ್ ಎಕ್ಸ್ ಚೇಂಜ್ ಬಳಿ ಗಣೇಶ್ ಶೆಟ್ಟಿ ಎಂಬವರು ಬೈಕ್ ನಲ್ಲಿ ಬರುತ್ತಿದ್ದರು. ಈ ಸಂದರ್ಭ ಈ ಮಂಗಳಮುಖಿ ರಸ್ತೆಗೆ ಅಡ್ಡವಾಗಿ ನಿಂತು ಬೈಕ್ ತಡೆದಿದ್ದಾನೆ. ಬಳಿಕ ಹತ್ತಿರ ಬಂದು ಗಣೇಶ್ ಶೆಟ್ಟಿಯವರಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಅವರ ಕತ್ತಿನಲ್ಲಿದ್ದ 24 ಗ್ರಾಂ ಸರವನ್ನು ಎಗರಿಸಿದ್ದಾನೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಮಂಗಳಮುಖಿಯನ್ನು ಪತ್ತೆಹಚ್ಚಿರುವ ಪೊಲೀಸರು ‌ಅರೆಸ್ಟ್ ಮಾಡಿದ್ದಾರೆ. ಈತನಿಂದ 71 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡ ಪೊಲೀಸರಿಗೆ ಈತ ಇಂತಹ ಮೂರು ಕೃತ್ಯದಲ್ಲಿ ಭಾಗಿಯಾಗಿರೋದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

See also  ಶಾಸಕನ ಬೆಂಬಲಿಗರಿಂದ ಸಾಕ್ಷಿದಾರರ ಮನೆಗೆ ನುಗ್ಗಿ ಬೆದರಿಕೆ..! ಮುನಿರತ್ನ ವಿರುದ್ಧ ಸಾಕ್ಷಿ ಹೇಳಿದ್ರೆ ಮನೆಗೆ ಬೆಂಕಿ ಹಚ್ಚುತ್ತೇವೆ ಎಂದ ಮಹಿಳೆ..!
  Ad Widget   Ad Widget   Ad Widget