ದೇಶ-ಪ್ರಪಂಚಬೆಂಗಳೂರುರಾಜಕೀಯ

ನಿಮಗೆ ತಾಕತ್ತು ಇದೆಯೋ ಹಾಗಾದರೆ ಮತ್ತೆ ಹಿಜಾಬ್ ತನ್ನಿ ನೋಡೋಣ..,ರಾಜ್ಯ ಸರ್ಕಾರಕ್ಕೆ ಕಲ್ಲಡ್ಕ ಪ್ರಭಾಕರ್‌ ಭಟ್ ಸವಾಲು

ನ್ಯೂಸ್ ನಾಟೌಟ್ :ನಿಮಗೆ ತಾಕತ್ತು ಇದೆಯೋ ಹಾಗಾದರೆ ಮತ್ತೆ ಹಿಜಾಬ್ ತನ್ನಿ ನೋಡೋಣ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ರಾಜ್ಯ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಭಾನುವಾರ ನಡೆದ ಹನುಮ ಸಂಕೀರ್ತನೆ ಯಾತ್ರೆ ಪ್ರಯುಕ್ತ ನಿಮಿಷಾಂಬಾ ದೇವಸ್ಥಾನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ” ಹಿಜಾಬ್ ಮತ್ತೆ ವಾಪಸ್ ತರ್ತಿವಿ ಅಂತ ಸಿಎಂ ಸಿದ್ದರಾಮಯ್ಯನವರು ಹೇಳಿಕೆ ಕೊಟ್ಟಿದ್ದಾರೆ.ಅವರು ಮತ್ತೆ ಪ್ರತ್ಯೇಕತೆಯ ಬೀಜ ಬೀತ್ತುತ್ತಿದ್ದಾರೆ. ನೀವೇ ಸಮವಸ್ತ್ರ ಮಾಡಿದ್ದೀರಾ? ಈಗ ಮತ್ತೆ ನೀವೇ ಪ್ರತ್ಯೇಕ ಮಾಡ್ತಿದ್ದೀರಾ? ನಿಮಗೆ ತಾಕತ್ತಿದ್ದರೆ ಮತ್ತೆ ಹಿಜಾಬ್ ತನ್ನಿ ನೋಡೋಣ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ನಿಮಗೆ ಹಿಜಾಬ್ ನಿಷೇಧವನ್ನು ವಾಪಸ್ ತರುವ ತಾಕತ್ತಿದೆಯಾ?ಹಿಜಾಬ್ ಧರಿಸಲು ಅನುಮತಿ ಕೊಟ್ಟರೆ ನಾವು ಕೇಸರಿ ಶಾಲು ಧರಿಸಿ ಹೋಗ್ತಿವಿ. ನೀವು ಅಲ್ಲಾಹು ಅಕ್ಬರ್ ಅಂದ್ರೆ ನಾವು ಜೈ ಶ್ರೀರಾಮ್ ಹೇಳ್ತೇವೆ ಎಂದು ಹೇಳಿದರು.

ಹಿಂದು ಸಮಾಜ ಉಳಿಯಬೇಕಾದರೆ ಒಂದು ಮಗು ಸಾಕು ಅನ್ನುವ ನಿರ್ಧಾರವನ್ನು ಬಿಡಿ.ಹಿಂದೂಗಳ ಸಂಖ್ಯೆ ಕುಸಿಯುತ್ತಿದೆ. ಹಿಂದೂಗಳು ದಯವಿಟ್ಟು ಮೂರು ಮಕ್ಕಳು ಮಾಡಿಕೊಳ್ಳಿ. ನಾವು ಕಡಿಮೆ ಆಗ್ತಿದ್ದೇವೆ, ಮುಸ್ಲಿಮರ ಸಂಖ್ಯೆ ಹೆಚ್ಚಾಗ್ತಿದೆ. ಮುಸ್ಲಿಂರ ಸಂಖ್ಯೆ ಹೆಚ್ಚಾದ್ರೆ ಅವ್ರು ಪಾಕಿಸ್ತಾನ ಜಿಂದಾಬಾದ್ ಅಂತಾರೆ , ಪಾಕಿಸ್ತಾನದ ಪರವಾಗಿ ಚಿಂತನೆ ಮಾಡ್ತಾರೆ. ಕೇರಳ ಸ್ಟೋರಿ, ಕಾಶ್ಮೀರ ಫೈಲ್ ಸಿನಿಮಾ ನೋಡಿ. ಮುಸಲ್ಮಾನ ಹುಡುಗರಲ್ಲದೇ, ಮುಸಲ್ಮಾನ ಹುಡುಗಿಯರು ಹಿಂದೂಗಳಿಗೆ ಮೋಸ ಮಾಡ್ತಾರೆ ಎಂದು ಆರೋಪಿಸಿದರು.

Related posts

ಪುತ್ತೂರು ಮತ್ತು ಬೆಳ್ತಂಗಡಿಗೆ ಬರಲಿದ್ದಾರೆ ಅಣ್ಣಾಮಲೈ ಮತ್ತು ಬಿ.ವೈ ವಿಜಯೇಂದ್ರ, ಇಲ್ಲಿದೆ ಸಂಪೂರ್ಣ ಮಾಹಿತಿ

ಬಾಡಿಗೆ ಮನೆಯಲ್ಲಿರುವವರಿಗೆ ಸಿಹಿ ಸುದ್ದಿ..! ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆಯಲ್ಲಿ ರಾಜ್ಯ ಸರ್ಕಾರದ ಮಹತ್ವದ ಬದಲಾವಣೆ..!ಏನದು ಡಿ-ಲಿಂಕ್ ಸೌಲಭ್ಯ?

ಹೆಲ್ಮೆಟ್ ಇಲ್ಲದೇ ಸಂಚರಿಸಿದ ಬಾಲಿವುಡ್ ನ ಖ್ಯಾತ ತಾರೆಯರು:ಅಮಿತಾಬ್ ಬಚ್ಚನ್ , ಅನುಷ್ಕಾ ಶರ್ಮಾ ವಿರುದ್ಧ ಕ್ರಮಕ್ಕೆ ಮುಂದಾದ ಪೊಲೀಸ್!