Latestಕ್ರೈಂಸಿನಿಮಾ

`ಮಂಡ್ಯದ ಗಂಡು’ ಸಿನಿಮಾದ ಖ್ಯಾತ ನಿರ್ದೇಶಕ, ಬರಹಗಾರ ನಿಧನ..! 55 ಸಿನಿಮಾಗಳನ್ನು ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ

484

ನ್ಯೂಸ್ ನಾಟೌಟ್: `ಮಂಡ್ಯದ ಗಂಡು’ ಸಿನಿಮಾ ನಿರ್ದೇಶಿಸಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಎಟಿ ರಘು ಗುರುವಾರ(ಮಾ.20) ರಾತ್ರಿ ನಿಧನರಾಗಿದ್ದಾರೆ.

76 ವರ್ಷದ ರಘು ಅನಾರೋಗ್ಯದಿಂದ ಬಳಲುತ್ತಿದ್ದರು. ಜೊತೆಗೆ ಡಯಾಲಿಸಿಸ್ ಮಾಡಿಸಿಕೊಳುತ್ತಿದ್ದರು. ಗುರುವಾರ ರಾತ್ರಿ 9:20ರ ಸುಮಾರಿಗೆ ಕೊನೆಯುಸಿರೆಳೆದಿದ್ದು, ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.

ಸದ್ಯ ಆರ್‌ಟಿ ನಗರದ ಮಠದಹಳ್ಳಿಯಲ್ಲಿ ಪಾರ್ಥಿವ ಶರೀರ ಇಡಲಾಗಿದ್ದು, ಇಂದು ಮದ್ಯಾಹ್ನ 2-3 ಗಂಟೆಯೊಳಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕನ್ನಡ ಚಿತ್ರರಂಗದಲ್ಲಿ ಬರಹಗಾರ ಹಾಗೂ ಖ್ಯಾತ ನಿರ್ದೇಶಕರಾಗಿದ್ದ ಇವರು, ಸಾಹಸ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದರು. `ಮಂಡ್ಯದ ಗಂಡು’ ಸಿನಿಮಾ ಸೇರಿದಂತೆ ಒಟ್ಟು 55 ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇನ್ನೂ ರೆಬೆಲ್ ಸ್ಟಾರ್ ಅಂಬರೀಶ್ ನಟನೆಯ 27 ಸಿನಿಮಾಗಳನ್ನು ನಿರ್ದೇಶಿದ್ದರು.

ಇದನ್ನೂ ಓದಿ: ಆಕೆಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಹಾಸ್ಟೆಲ್‌ ಗೆ ನುಗ್ಗಿದ ಯುವಕ..! ಆತನನ್ನು ವಶಕ್ಕೆ ಪಡೆದ ಪೊಲೀಸರು..!

ಮಂಡ್ಯದ ಗಂಡು ಸಿನಿಮಾ ಸೇರಿದಂತೆ ಕನ್ನಡದ ಮಿಡಿದ ಹೃದಯಗಳು, ಜೈಲರ್ ಜಗನ್ನಾಥ್, ಬೇಟೆಗಾರ, ಧರ್ಮ ಯುದ್ಧ, ನ್ಯಾಯ ನೀತಿ ಧರ್ಮ ಇನ್ನಿತರ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

See also  ತರಗತಿಯೊಳಗೆ ನಿದ್ರೆಗೆ ಜಾರಿದ ೧ನೇ ಕ್ಲಾಸಿನ ವಿದ್ಯಾರ್ಥಿ, ಶಾಲೆಗೆ ಬೀಗ ಹಾಕಿ ಮನೆ ಕಡೆ ಹೆಜ್ಜೆ ಹಾಕಿದ ಶಿಕ್ಷಕ.. ಮುಂದೇನಾಯ್ತು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget