ವೈರಲ್ ನ್ಯೂಸ್

ಸದಾ ಯುವಕನಂತೆ ಕಾಣಿಸಿಕೊಳ್ಳಲು ದಿನಕ್ಕೆ ಬರೋಬ್ಬರಿ 111 ಮಾತ್ರೆಗಳ ಸೇವನೆ..!,ಇದು 3,330 ಕೋಟಿ ರೂ.ಆಸ್ತಿಯ ಮಾಲೀಕನ ರಿಯಲ್ ಕಥೆ..!

228

ನ್ಯೂಸ್ ನಾಟೌಟ್ :ಸೆಲೆಬ್ರೆಟಿಗಳು, ಮಿಲಿಯನೇರ್‌ಗಳು ಮತ್ತು ಬಿಲಿಯನೇರ್‌ಗಳ ಲೈಫ್‌ ಸ್ಟೈಲ್‌ ವಿಭಿನ್ನವಾಗಿರುತ್ತೆ. ತಾವು ಯಾವತ್ತೂ ಚಿರಯೌವನದಂತೆ ಕಾಣೋದಕ್ಕೆ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಲೇ ಇರುತ್ತಾರೆ.ನಾನಾ ರೀತಿಯ ಚಿಕಿತ್ಸೆಗೆ ಮೊರೆ ಹೋಗುತ್ತಾರೆ. ಆದರೆ ಬ್ರಿಯಾನ್ ಜಾನ್ಸನ್ ಎಂಬವರು ಶಾಶ್ವತವಾಗಿ ಚಿರಯುವಕನಾಗಿರಲು ದಿನಕ್ಕೆ 111 ಪಿಲ್ಸ್ ತೆಗೆದುಕೊಳ್ಳುತ್ತಿದ್ದಾರೆ. ನಂಬೋಕೆ ಕಷ್ಟವೆನಿಸಿದರೂ ಇದು ನಿಜ. 

ಬ್ರಿಯಾನ್ ಜಾನ್ಸನ್ ಒಬ್ಬ ವಾಣಿಜ್ಯೋದ್ಯಮಿ ಮತ್ತು ಟೆಕ್ ಮಿಲಿಯನೇರ್ ಆಗಿದ್ದು, ಬರೋಬ್ಬರಿ USD 400 ಮಿಲಿಯನ್‌ಗಿಂತಲೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 3330 ಕೋಟಿ ರೂ. ಹೆಚ್ಚಾಗಿದೆ. ಹೀಗಾಗಿಯೇ ಇವರು ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು.ಹೀಗಾಗಿ ಅವರು ಯಾವತ್ತೂ ಚಿರಯುವಕನಾಗಿರುವುದು ಹೇಗೆ ಎಂಬ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ನಿರ್ಧರಿಸಿದ್ದಾರಂತೆ..!

46 ವರ್ಷದ ಬ್ರಿಯಾನ್ ಮೂರು ವರ್ಷಗಳ ಹಿಂದೆ ಸಾ*ವೇ ಸಂಭವಿಸದಿರಲು ಮತ್ತು ಶಾಶ್ವತವಾಗಿ ಯುವಕರಾಗಿರಲು ಹಲವಾರು ಅಭ್ಯಾಸಗಳನ್ನು ಅನುಸರಿಸಲು ಆರಂಭಿಸಿದರು. ಇದೇ ಸಂದರ್ಭದಲ್ಲಿ ಬ್ಲೂಪ್ರಿಂಟ್ ಪ್ರಾಜೆಕ್ಟ್ ಆರಂಭಿಸಿದರು. ಶಾಶ್ವತವಾಗಿ ಬದುಕುವ ಅವರ ಕನಸು ಪ್ರತಿದಿನ 111 ಮಾತ್ರೆಗಳನ್ನು ತೆಗೆದುಕೊಳ್ಳುವುದು ಮತ್ತು ಪ್ರತಿದಿನ ಮಲ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸುವುದನ್ನು ಒಳಗೊಂಡಿದೆ. 

ಸಾಮಾನ್ಯವಾಗಿ ಎರಡು ಮಾತ್ರೆಗಳನ್ನು ನುಂಗೋದಕ್ಕೆ ಹಿಂದೇಟು ಹಾಕುವ ಜನ ಇಷ್ಟೊಂದು ಮಾತ್ರೆಗಳನ್ನು ಹೇಗೆ ತಿನ್ನುತ್ತಾರೆ ಅನ್ನೋದೇ ವಿಶೇಷ. ನೆತ್ತಿಯ ಮೇಲೆ ಕೆಂಪು ಬೆಳಕನ್ನು ಹೊರಸೂಸುವ ವಿಶೇಷ ಕ್ಯಾಪ್ ಅನ್ನು ಧರಿಸುತ್ತಾರೆ. ಮಿಲಿಯನೇರ್ ತನ್ನ ಬ್ಲೂಪ್ರಿಂಟ್‌ನಲ್ಲಿ ರೂ 33 ಕೋಟಿ ಹೂಡಿಕೆ ಮಾಡಿದ್ದಾರೆ. ಅದು ಅವನನ್ನು ಶಾಶ್ವತವಾಗಿ ಬದುಕುವಂತೆ ಮಾಡುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ.

See also  ಕನ್ನಡ ಸೀರಿಯಲ್ ನಟನ ವಿರುದ್ಧ ಮತ್ತೊಂದು ಕೇಸ್..! ಸುಲಿಗೆ, ಲೈಂಗಿಕ ಕಿರುಕುಳ ಆರೋಪ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget