ಕ್ರೈಂವೈರಲ್ ನ್ಯೂಸ್

ಗುದನಾಳದಲ್ಲಿ 403 ಗ್ರಾಂ ಚಿನ್ನ ಸಾಗಿಸಿದ ಪ್ರಯಾಣಿಕ…!

329

ನ್ಯೂಸ್‌ ನಾಟೌಟ್‌: ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳ ಸಾಗಾಟ ಪ್ರಕರಣ ದಿನೇ ದಿನ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 21 ಲಕ್ಷ ರೂ. ಮೌಲ್ಯದ 403 ಗ್ರಾಂ ಚಿನ್ನಾಭರಣವನ್ನು ಪ್ರಯಾಣಿಕನೊಬ್ಬನಿಂದ ವಶಪಡಿಸಿಕೊಳ್ಳಲಾಗಿದೆ.

ಜೆಡ್ಡಾದಿಂದ ಇಂಡಿಗೋ ವಿಮಾನ ಸಂಖ್ಯೆ 6E-068 ಮೂಲಕ ಹೈದರಾಬಾದ್‌ಗೆ ಬಂದಿಳಿದ ಪ್ರಯಾಣಿಕ ಗುದನಾಳದಲ್ಲಿ ಚಿನ್ನವನ್ನು ಬಚ್ಚಿಟ್ಟು ಸಾಗಿಸುತ್ತಿದ್ದ ವಿಚಾರ ಪೊಲೀಸರಿಗೆ ತಿಳಿಯಿತು. ತಕ್ಷಣ ಪ್ರಯಾಣಿಕನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ ವೇಳೆ ಪೇಸ್ಟ್​ ರೂಪದಲ್ಲಿ ಚಿನ್ನವನ್ನು ಕ್ಯಾಪ್ಸ್ಯೂಲ್​ಗಳನ್ನು ಗುದನಾಳದಲ್ಲಿ ಇಟ್ಟು ಸಾಗಿಸುತ್ತಿದ್ದುದು ಕಂಡು ಬಂದಿದೆ. ಜೆಡ್ಡಾದಿಂದ ಬಂದ ಬಳಿಕ ಆರೋಪಿ ಹೈದರಾಬಾದ್​ನಿಂದ ಚಿನ್ನವನ್ನು ಜೈಪುರಕ್ಕೆ ಸಾಗಿಸಲು ಯೋಜನೆ ರೂಪಿಸಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ.

ಬಂಧಿತ ಆರೋಪಿಯಿಂದ 21,63,707 ಲಕ್ಷ ರೂಪಾಯಿ ಮೌಲ್ಯದ 403 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

See also  ಮಾರಕ ಆಯುಧಗಳೊಂದಿಗೆ ಮಾದಕ ದ್ರವ್ಯ ಮಾರಾಟ ಮಾಡಲು ಬಂದ ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು..! ಬಂಧಿತರಿಂದ 4 ಗ್ರಾಂ ನಿಷೇಧಿತ ಡ್ರಗ್ಸ್ , 3 ಮಾರಕ ಆಯುಧ ವಶಕ್ಕೆ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget