Latest

ಬಂಟ್ವಾಳ:13ನೇ ವಯಸ್ಸಿಗೆ ಮನೆ ಬಿಟ್ಟಿದ್ದ ವ್ಯಕ್ತಿ 62 ವರ್ಷಗಳ ಬಳಿಕ ವಾಪಸ್‌..!ಅಷ್ಟಕ್ಕೂ ಇಷ್ಟು ವರ್ಷ ಎಲ್ಲಿದ್ದರು? ಏನು ಮಾಡುತ್ತಿದ್ದರು?

1.6k

ನ್ಯೂಸ್‌ ನಾಟೌಟ್: ಸುಮಾರು 62 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯೊಬ್ಬರು ಮನೆಗೆ ಆಗಮಿಸಿ ಅಚ್ಚರಿ ಮೂಡಿಸಿದ ಘಟನೆ ಬಗ್ಗೆ ಬಂಟ್ವಾಳ ನರಿಕೊಂಬುವಿನಿಂದ ವರದಿಯಾಗಿದೆ. ತನ್ನ ಇವರು ತನ್ನ 13ನೇ ವಯಸ್ಸಿನಲ್ಲಿ ಮನೆ ಬಿಟ್ಟು ಮುಂಬಯಿಗೆ ತೆರಳಿದ್ದರು. ಇದೀಗ ಅವರು ನರಿಕೊಂಬಿಗೆ ಬಂದು ಅವರ ಅಣ್ಣನ ಹೆಸರು ಹೇಳಿ ಮನೆ ಹುಡುಕಿಕೊಂಡು ಬಂದು ಮನೆ ಮಂದಿಗೆ ಅಚ್ಚರಿ ಮೂಡಿಸಿದ್ದಾರೆ.

ಏನಿದು ಘಟನೆ?

ನರಿಕೊಂಬು ಗ್ರಾಮದ ಕರ್ಬೆಟ್ಟು ಗೌಂಡ್ಲೆಪಾಲ್ ಸಂಜೀವ ಪೂಜಾರಿ (75) ಅವರು 62 ವರ್ಷಗಳ ಹಿಂದೆ ಸ್ಥಳೀಯ ನಿವಾಸಿ ತನಿಯಪ್ಪ ಅವರ ಜತೆಗೆ ಮುಂಬಯಿಗೆ ಕೆಲಸಕ್ಕಾಗಿ ತೆರಳಿದ್ದರು. ಬಳಿಕ ತಾವು ಹೋಗಿದ್ದ ಕೆಲಸವನ್ನು ಬಿಟ್ಟು ಮನೆಯವರ ಸಂಪರ್ಕವನ್ನೂ ಕಳೆದುಕೊಂಡಿದ್ದರು.ಮನೆಯವರು ಅಂದು ಅವರನ್ನು ಹುಡುಕುವ ಪ್ರಯತ್ನ ಮಾಡಿದ್ದರೂ ಇವರು ಪತ್ತೆಯಾಗಿರಲಿಲ್ಲ. ಇದೀಗ ಬರೋಬ್ಬರಿ 62 ವರ್ಷಗಳ ನಂತರ ಗುರುವಾರ ಮಧ್ಯಾಹ್ನ ಅವರು ನರಿಕೊಂಬಿಗೆ ಬಂದು ಅವರ ಅಣ್ಣನ ಹೆಸರು ಹೇಳಿ ಮನೆ ಹುಡುಕಿಕೊಂಡು ಬಂದಿದ್ದು ಮನೆ ಮಂದಿಗೂ ಅಚ್ಚರಿಯಾಗುವಂತೆ ಮಾಡಿದ್ದಾರೆ.

ಮನೆಯವರು ಕೇಳಿದ ನೂರಾರು ಪ್ರಶ್ನೆಗಳಿಗೆ ಉತ್ತರಿಸಿ, ಮುಂಬಯಿಗೆ ಹೋದವನು ಹಲವಾರು ಕಡೆ ಕೆಲಸ ಮಾಡಿ ಬಳಿಕ ಯಾವುದೋ ಲಾರಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದೆ. ಆದರೆ 60 ವರ್ಷದ ಬಳಿಕ ಅಲ್ಲಿ ಕೆಲಸಕ್ಕೆ ಅವಕಾಶವಿರಲಿಲ್ಲ. ಮತ್ತೆ ಬೇರೆ ಬೇರೆ ಕೆಲಸ ಮಾಡಿ ಕಳೆದ 2ವರ್ಷಗಳಿಂದ ಮುಂಬಯಿಯ ಹೊಟೇಲೊಂದರಲ್ಲಿದ್ದೆ. ಆದರೆ ಅದರ ಮಾಲಕ ಸಂಬಳವನ್ನೇ ಕೊಟ್ಟಿಲ್ಲ. ಹೀಗಾಗಿ ಜೂ. 4ರಂದು ಬಸ್ಸಿನಲ್ಲಿ ಮುಂಬಯಿಯಿಂದ ಹೊರಟು ಮಂಗಳೂರಿಗೆ ಆಗಮಿಸಿದೆ. ಅಲ್ಲಿಂದ ಪಾಣೆಮಂಗಳೂರಿಗೆ ಬಂದು ನರಿಕೊಂಬಿಗೆ ಬಂದಿದ್ದೇನೆ ಎಂದು ಮನೆಮಂದಿಗೆ ತಿಳಿಸಿದ್ದಾರೆ.

See also  ಮಾಲೀಕನನ್ನು ರಕ್ಷಿಸಲು ಹುಲಿಯ ಜತೆ ಹೋರಾಡಿದ್ದ ನಾಯಿ ಚಿಕಿತ್ಸೆ ಫಲಿಸದೆ ಸಾವು..! ಇಲ್ಲಿದೆ ಮನಕಲಕುವ ಘಟನೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget