Latestಕ್ರೈಂದೇಶ-ವಿದೇಶ

ಕುಂಭಮೇಳಕ್ಕೆ ಪತ್ನಿಯನ್ನು ಕರೆದೊಯ್ದು ಹತ್ಯೆ..! ಠಾಣೆಗೆ ಬಂದು ಕುಂಭಮೇಳದಲ್ಲಿ ಪತ್ನಿ ನಾಪತ್ತೆ ಎಂದು ದೂರು ನೀಡಿದ್ದ ಆಸಾಮಿ ಅರೆಸ್ಟ್..!

778
Spread the love

ನ್ಯೂಸ್ ನಾಟೌಟ್: ಮಹಾಕುಂಭಮೇಳದ ಸಂದರ್ಭದಲ್ಲಿ ಸಂಗಮ ನಗರದಲ್ಲಿ ಪತ್ನಿಯನ್ನು ಕೊಂದು, ಆಕೆ ನಾಪತ್ತೆಯಾಗಿದ್ದಾಳೆ ಎಂದು ಕಥೆ ಕಟ್ಟಿದ ದೆಹಲಿಯ ವ್ಯಕ್ತಿಯೊಬ್ಬನನ್ನು ಬೈರಾನಾ ಪ್ರದೇಶದಲ್ಲಿ ಬಂಧಿಸಲಾಗಿದೆ.

ಆರೋಪಿ ಅಶೋಕ್ ಕುಮಾರ್ (48) ದೆಹಲಿಯ ತ್ರಿಲೋಕಪುರಿ ಪ್ರದೇಶದಲ್ಲಿ ವಾಸವಿದ್ದ ಎನ್ನಲಾಗಿದೆ. ಇದೀಗ ಆತನ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ತಿರುಚಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಪತಿಯ ವಿವಾಹೇತರ ಸಂಬಂಧವನ್ನು ಆಕ್ಷೇಪಿಸಿದ್ದ ಪತ್ನಿಯ ಜತೆ ಈತನ ಸಂಬಂಧ ಹಳಸಿತ್ತು ಎನ್ನಲಾಗಿದೆ.

ಪತ್ನಿಯ ಕೊಲೆಗೆ ಸಂಚು ರೂಪಿಸಿ ಕುಂಭಮೇಳವನ್ನು ಉತ್ತಮ ಅವಕಾಶ ಎಂದು ಆರೋಪಿ ಕಂಡುಕೊಂಡಿದ್ದಾಗಿ ಡಿಸಿಪಿ ಅಶೋಕ್ ಭಾರ್ತಿ ಹೇಳಿದ್ದಾರೆ. ದೆಹಲಿ ನಗರ ನಿಗಮದಲ್ಲಿ ನೈರ್ಮಲ್ಯ ಕಾರ್ಮಿಕನಾಗಿರುವ ಆರೋಪಿ, ತನ್ನ ಕುಂಭಮೇಳ ಯಾತ್ರೆಯ ಹಲವು ವಿಡಿಯೊಗಳನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ. ಪ್ರಯಾಗ್ ರಾಜ್ ನಲ್ಲಿ ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಪೊಲೀಸ್ ಠಾಣೆಗೆ ಭೇಟಿ ನೀಡಿ, ಪತ್ನಿ ಕಳೆದುಹೋದ ಬಗ್ಗೆ ದೂರು ನೀಡಿ ಬಳಿಕ ತಲೆ ಮರೆಸಿಕೊಂಡಿದ್ದ.

ಕಳೆದ ಮಂಗಳವಾರ(ಫೆ.18) ದೆಹಲಿಯಿಂದ ಪ್ರಯಾಗ್ ರಾಜ್ ಗೆ ಈ ದಂಪತಿ ಆಗಮಿಸಿದ್ದು, ಅಜಾತ್ ನಗರ ಮತ್ತು ಕೆಟ್ವಾನದಲ್ಲಿ ಬಾಡಿಗೆ ಕೊಠಡಿ ಪಡೆದಿದ್ದ. ಆದರೆ ತಮ್ಮ ಗುರುತಿನ ಪುರಾವೆ ನೀಡಿರಲಿಲ್ಲ. ಮರುದಿನ ಬೆಳಿಗ್ಗೆ ಮಹಿಳೆಯೊಬ್ಬರ ದೇಹ ಬಾತ್ರೂಂನಲ್ಲಿ ಪತ್ತೆಯಾಗಿತ್ತು. ಆದರೆ ಅಶೋಕ್ ಕುಮಾರ್ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ಮೃತ ಮಹಿಳೆಯ ಸಹೋದರ ಪ್ರವೇಶ್ ಕುಮಾರ್ ಮತ್ತು ಆಕೆಯ ಮಕ್ಕಳ ಸಹಾಯದಿಂದ ಮಹಿಳೆಯ ಗುರುತು ಪತ್ತೆ ಮಾಡಿದ್ದಾರೆ. ಆಕೆಯನ್ನು ಮೀನಾಕ್ಷಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕತ್ತು ಸೀಳಿ ಪತ್ನಿಯ ಹತ್ಯೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡ ಎಂದು ಪೊಲೀಸರು ಹೇಳಿದ್ದಾರೆ.

See also  ಟ್ರಸ್ಟ್ ಗಳ ಹೆಸರಲ್ಲಿ ದೇಣಿಗೆ ಸಂಗ್ರಹಿಸಲು ನಿಮ್ಮ ಬಳಿಯೂ ಬಂದಿದ್ದಾರಾ..? ಮೆಟ್ರೋದಲ್ಲಿ ಸಿಕ್ಕಿಬಿದ್ದ ಈ ಮಹಿಳೆ ಮಾಡಿದ ಪ್ಲಾನ್ ಏನು? ನಿಮ್ಮ ಬಳಿಯೂ ಇಂಥವರು ಬರಬಹುದು ಎಚ್ಚರ..!
  Ad Widget   Ad Widget   Ad Widget   Ad Widget