ದೇಶ-ಪ್ರಪಂಚ

ಕಣ್ಣೆದುರಿಗೆ ಸಿಂಹವಿದ್ದರೂ ಈ ವ್ಯಕ್ತಿಗೆ ಡೋಂಟ್ ಕೇರ್,ಸಿಂಹವನ್ನೇ ಬೆದರಿಸಿ ಓಡಿಸಿದ ವಿಡಿಯೋ ವೈರಲ್

ನ್ಯೂಸ್ ನಾಟೌಟ್ : ಕಾಡಿನ ರಾಜ ಎಂದೇ ಕರೆಸಿಕೊಳ್ಳುವ ಸಿಂಹವನ್ನು ಕಂಡೊಡನೆ ಪ್ರಾಣವೇ ನಿಂತಂತೆ ಭಾಸವಾಗುತ್ತದೆ.ಕೈ ಕಾಲು ನಡುಗಿ ಏನು ಮಾಡಲೂ ಆಗದ ಪರಿಸ್ಥಿತಿ ಆಗಬಹುದು.ಆದರೆ ಇಲ್ಲೊಬ್ಬ ವ್ಯಕ್ತಿ ಸಿಂಹವನ್ನು ಕಂಡು ಶ್ವಾನ ಓಡಿಸುವ ರೀತಿಯಲ್ಲೇ ಓಡಿಸುವ ವಿಡಿಯೋ ಇದೀಗ ವೈರಲ್ ಆಗಿದೆ.

ತನ್ನ ಹಸುವನ್ನು ಕಾಪಾಡಿಕೊಳ್ಳಲು ಆತ ತೋರಿದ ಧೈರ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಗುಜರಾತ್‌ನ ಗಿರ್‌ ಸೋಮನಾಥ್‌ ಜಿಲ್ಲೆಯಲ್ಲಿ ಸಿಂಹವೊಂದು ಹಸುವಿನ ಮೇಲೆ ದಾಳಿ ಮಾಡುತ್ತದೆ.ತಾನು ಸಾಕಿದ ಹಸುವನ್ನು ಕಂಡು ಆ ವ್ಯಕ್ತಿ ಹೇಗಾದರೂ ಮಾಡಿ ಹಸುವನ್ನು ಬದುಕಿಸಬೇಕೆಂದು ಅದನ್ನು ನಿರ್ಧರಿಸುತ್ತಾನೆ.

ಹಸುವನ್ನು ಸಿಂಹವೊಂದು ಎಳೆದೊಯ್ಯಲೆಂದು ಅದರ ಕುತ್ತಿಗೆಯನ್ನು ಬಾಯಿಯಿಂದ ಗಟ್ಟಿಯಾಗಿ ಕಚ್ಚಿಕೊಂಡಿರುತ್ತದೆ. ಈ ದೃಶ್ಯವನ್ನು ಹಸುವಿನ ಮಾಲೀಕ ನೋಡಿ, ತನ್ನ ಹಸುವನ್ನು ರಕ್ಷಿಸಿಕೊಳ್ಳುವುದಕ್ಕೆ ಮುಂದಾಗುತ್ತಾನೆ. ರಸ್ತೆ ಮೇಲೆ ಸಿಂಹ ಮತ್ತು ದನವಿದ್ದರೆ, ದನದ ಮಾಲೀಕ ಧೈರ್ಯ ಮಾಡಿ ಸಿಂಹದ ಬಳಿಯೇ ಬರಲಾರಂಭಿಸುತ್ತಾನೆ.ಈ ವೇಳೆ ಹಸು ಸಿಂಹದ ಬಾಯಿಯಿಂದ ತಪ್ಪಿಸಿಕೊಳ್ಳಲೆಂದು ಪ್ರಯತ್ನ ಮಾಡುವ ವೇಳೆಯಲ್ಲೇ ಹಸುವಿನ ಮಾಲೀಕ ರಸ್ತೆ ಬದಿಯಿದ್ದ ಕಲ್ಲನ್ನು ತೆಗೆದುಕೊಂಡು ಸಿಂಹದತ್ತ ಎಸೆಯುವಂತೆ ಮಾಡುತ್ತಾನೆ. ಅದನ್ನು ಕಂಡೊಡನೆ ಸಿಂಹ ಭಯದಿಂದ ಹಸುವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗುತ್ತದೆ.

ಈ ಭಯಾನಕ ದೃಶ್ಯವನ್ನು ಕಂಡಾಗ ಮೈ ಜುಂ ಅನ್ನಿಸದಿರದು. ಅದೇ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಕಾರೊಂದರಲ್ಲಿದ್ದ ಜನ ಮೊಬೈಲ್‌ನಲ್ಲಿ ಇದನ್ನು ಸೆರೆ ಹಿಡಿದಿದ್ದಾರೆ. ಆ ವಿಡಿಯೊವನ್ನು ಗುಜರಾತ್‌ನ ಜುನಗಢ್‌ನ ಬಿಜೆಪಿ ಕಾರ್ಪೋರೇಟರ್‌ ಆಗಿರುವ ವಿವೇಕ್‌ ಕೋಟದಿಯಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಸುವಿನ ರಕ್ಷಣೆಗಾಗಿ ತನ್ನ ಪ್ರಾಣವನ್ನೂ ಒತ್ತೆಯಿಡುವುದಕ್ಕೆ ಸಿದ್ಧನಾದ ಹಸುವಿನ ಮಾಲೀಕನ ಬಗ್ಗೆ ಮೆಚ್ಚುಗೆಯ ಮಾತುಗಳೇ ಕೇಳಿಬಂದಿದೆ.

Related posts

ಹಮಾಸ್ ಉಗ್ರರಿಗೆ ಚೀನಾ ಶಸ್ತ್ರಾಸ್ತ್ರ ಪೂರೈಸುತ್ತಿದೆಯಾ? ಇಸ್ರೇಲ್ ಬೆನ್ನಿಗೆ ನಿಂತಿರೋ ಅಮೆರಿಕ ಇಸ್ರೇಲ್ ಗಾಜಾ ವಶಪಡಿಸಿಕೊಳ್ಳೋದು ತಪ್ಪು ಎಂದದ್ದೇಕೆ?

ವರನೇ ಇಲ್ಲದೆ ಮದುವೆ ಮಾಡಿಕೊಂಡ ಯುವತಿಯರು..? ಏನಿದು ನಕಲಿ ಸಾಮೂಹಿಕ ವಿವಾಹ..! ಎಫ್‌ಐಆರ್ ದಾಖಲು..!

2014ರಲ್ಲಿ ಎಂಜಿನಿಯರ್‌ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಿಸಿದ್ದ ಯುವತಿ..! ಇಂದು(ಜೂ.27) ತೀರ್ಪು ಪ್ರಕಟಿಸಿದ ಕೋರ್ಟ್..! ದೂರು ನೀಡಿದಾಕೆ ಸೇರಿ 13 ಮಂದಿಯ ಜೈಲುಪಾಲು..!