ವೈರಲ್ ನ್ಯೂಸ್

ಲೈವ್ ರಿಪೋರ್ಟಿಂಗ್ ವೇಳೆ ವರದಿಗಾರ್ತಿಯ ಖಾಸಗಿ ಅಂಗ ಸ್ಪರ್ಶಿಸಿದ ಅಪರಿಚಿತ ವ್ಯಕ್ತಿ..!,ಕ್ಯಾಮರಾದಲ್ಲಿ ಸೆರೆಯಾದ ವೈರಲ್ ವಿಡಿಯೋ ಇಲ್ಲಿದೆ ನೋಡಿ..

177

ನ್ಯೂಸ್ ನಾಟೌಟ್ : ಪತ್ರಕರ್ತೆಯೊಬ್ಬಳು ಕ್ಯಾಮರಾ ಮುಂದೆ ನಿಂತು ಲೈವ್​ ರಿಪೋರ್ಟ್​ ಮಾಡುವಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಆಕೆಯ ಖಾಸಗಿ ಅಂಗವನ್ನು ಸ್ಪರ್ಶಿಸುವ ಮೂಲಕ ಅನುಚಿತವಾಗಿ ವರ್ತಿಸಿರುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಸ್ಪೇನ್​ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​​ ಆಗಿದೆ.

ಪತ್ರಕರ್ತೆ ಇಸಾ ಬಲ್ಲಾಡೋ ಅವರು ಸ್ಪೇನ್​ ರಾಜಧಾನಿ ಮ್ಯಾಡ್ರಿಡ್​ನಲ್ಲಿ ನಡೆದ ದರೋಡೆಯ ಬಗ್ಗೆ ಲೈವ್​ ರಿಪೋರ್ಟ್​ ಮಾಡಿ ಮಾಹಿತಿಯನ್ನು ಆ್ಯಂಕರ್‌ಗೆ ಹೇಳುತ್ತಿದ್ದರು.ಈ ವೇಳೆ ಹಿಂದಿನಿಂದ ಬಂದ ಅಪರಿಚಿತನೊಬ್ಬ ಆಕೆಯ ಸೊಂಟದ ಬಳಿ ಸ್ಪರ್ಶಿಸಿದ್ದಾನೆ.ಇದರಿಂದ ಇಸಾ ಮುಜುಗರಕ್ಕೆ ಒಳಗಾಗಿದ್ದು ಇದು ಟಿವಿ ಲೈವ್‌ನಲ್ಲಿಯೇ ಹೋಗಿದೆ.

ಇಸಾ ಅವರು ಯಾವ ಟೆಲಿವಿಷನ್​ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಅಪರಿಚಿತ ಯತ್ನಿಸಿದ್ದು,ಇದಕ್ಕೆ ಪ್ರತಿಕ್ರಿಯಿಸುವ ಇಸಾ, ನಾವು ಯಾವ ಟಿವಿ ಸ್ಟೇಷನ್ ಎಂದು ತಿಳಿದುಕೊಳ್ಳಲು ನೀವು ಬಯಸುತ್ತೀರಿ, ನೀವು ನಿಜವಾಗಿಯೂ ನನ್ನನ್ನು ಮುಟ್ಟಬೇಕೆ? ನಾನು ಲೈವ್ ರಿಪೋರ್ಟ್ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.ಇದಕ್ಕೆ ಆ ವ್ಯಕ್ತಿ ಪ್ರತಿಕ್ರಿಯಿಸಿ ನಾನೇನು ತಪ್ಪು ಮಾಡಿಲ್ಲ. ನಾನು ನಿಮ್ಮನ್ನು ಮುಟ್ಟಿಯೇ ಇಲ್ಲ ಎಂದು ಹೇಳುತ್ತಾನೆ.

ಆದರೆ ಈತನ ಅನುಚಿತ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಆತ ಪ್ರತಿಕ್ರಿಯಿಸಿ ನಾನು ನಿಮ್ಮದನ್ನು ಮುಟ್ಟಲು ಬಯಸಲಿಲ್ಲ. ನಾನು ನಿಮ್ಮನ್ನು ಗೌರವಿಸುತ್ತೇನೆ ಎಂದಿದ್ದಾನೆ. ಮತ್ತೆ ಮತ್ತೆ ಇದನ್ನೇ ರಿಪೀಟ್ ಮಾಡುವ ಮೂಲಕ ಮೂಲಕ ಉದ್ಧಟತನ ಮೆರೆದಿದ್ದಾನೆ. ಈ ವೇಳೆ ನನಗೆ ಕೆಲಸ ಮಾಡಲು ಬಿಡಿ ಎಂದು ಪತ್ರಕರ್ತೆ ಇಸಾ ಹೇಳುವುದು ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ.

ಇತ್ತ ಸ್ಟುಡಿಯೋದಿಂದ ವಿಡಿಯೋ ವೀಕ್ಷಣೆ ಮಾಡುತ್ತಿದ್ದ ಟಿವಿ ನಿರೂಪಕ ಕೂಡ ಗಾಬರಿಯಾಗಿದ್ದಾರೆ.ಆ್ಯಂಕರ್ ಮಧ್ಯಪ್ರವೇಶಿಸಿ, ಆತ ನಿನ್ನನ್ನು ಸ್ಪರ್ಶಿಸಿದನೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಇಸಾ, ನಾಚಿಕೆಯಿಂದ ಹೌದು ಎಂದು ಹೇಳುತ್ತಾರೆ. ಇದರಿಂದ ಆಕ್ರೋಶಗೊಂಡ ನಿರೂಪಕ ಆತನನ್ನು ಕ್ಯಾಮೆರಾ ಮುಂದೆ ಗಮನಿಸುತ್ತಾನೆ.ಈ ವೇಳೆ ಆತ ನಾನೇನು ತಪ್ಪು ಮಾಡಿಲ್ಲ ಎಂದು ಮತ್ತೆ ಹೇಳುತ್ತಾನೆ.

ಕೊನೆಗೆ ವರದಿಗಾರ್ತಿ ನೀಡಿದ ಪೊಲೀಸ್ ದೂರು ನೀಡುತ್ತಾರೆ.ಈ ದೂರಿನ ಆಧಾರದ ಮೇಲೆ ಆರೋಪಿಯನ್ನು ಸ್ಪೇನ್​ ಪೊಲೀಸರು ಬಂಧಿಸಿದ್ದಾರೆ.  

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget