Latestಕ್ರೈಂರಾಜ್ಯವೈರಲ್ ನ್ಯೂಸ್

ಅಂಚೆ ಕಚೇರಿಯಲ್ಲಿ ಹಣಕೊಡುತ್ತಿದ್ದಾರೆ ಎಂದು ಹೇಳಿ ಅಜ್ಜಿಯ ಬಳಿ ಇದ್ದ ಒಡವೆಗಳನ್ನು ದೋಚಿ ವ್ಯಕ್ತಿ ಪರಾರಿ..! ಸೌತೆಕಾಯಿ ಮಾರಿ ಜೀವನ ಸಾಗಿಸುತ್ತಿದ್ದ ಹಿರಿಯ ಜೀವ..!

791

ನ್ಯೂಸ್ ನಾಟೌಟ್: ಅಂಚೆ ಕಚೇರಿಯಲ್ಲಿ ಹಣ ಕೊಡುತ್ತಿದ್ದಾರೆ ಎಂದು ಹೇಳಿ, ಅಜ್ಜಿಯ ಬಳಿ ಇದ್ದ ಒಡವೆಗಳನ್ನು ದೋಚಿ ವ್ಯಕ್ತಿಯೋರ್ವ ಪರಾರಿಯಾಗಿದ್ದಾನೆ. ಬೆಳಗಾವಿ ತಾಲೂಕಿನ ಮುತಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಉಮಕ್ಕ ರಾಮು ಕೇದಾರಿ (75) ಮೋಸ ಹೋಗಿರುವ ಅಜ್ಜಿ ಎಂದು ಗುರುತಿಸಲಾಗಿದೆ.

ಉಮಕ್ಕ ರಸ್ತೆ ಬದಿ ಸೌತೆಕಾಯಿ ಮಾರಿ ಜೀವನ ಸಾಗಿಸುತ್ತಿದ್ದಾರೆ. ಅಜ್ಜಿ ಉಮಕ್ಕ ಬಳಿ ವ್ಯಕ್ತಿಯೋರ್ವ ಬಂದು ಪರಿಚಯಸ್ಥನಂತೆ ಮಾತನಾಡಿಸಿದ್ದಾನೆ. ಬಳಿಕ, “ಅಂಚೆ ಕಚೇರಿಯಲ್ಲಿ ವಯಸ್ಸಾದವರಿಗೆ ಆರು ಸಾವಿರ ರೂ. ಹಣ ಕೊಡುತ್ತಾರೆ, ನೀನು ಬಾ” ಎಂದು ಉಮಕ್ಕ ಎಂಬವರನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕಯಾವುದೋ ಕಟ್ಟಡದ ಬಳಿ​ ಕರೆದುಕೊಂಡು ಹೋಗಿದ್ದಾನೆ.

ನಂತರ, ವಂಚಕ “ಬಂಗಾರ ಹಾಕಿಕೊಂಡು ಒಳಗೆ ಹೋದರೆ ಹಣ ಕೊಡೋದಿಲ್ಲ ಎಂದು ವೃದ್ಧೆ ಉಮಕ್ಕನಿಗೆ ಹೇಳಿದ್ದಾನೆ. ವಂಚಕನ ಮಾತು ನಂಬಿದ ಉಮಕ್ಕ, ಬಂಗಾರದ ಓಲೆ ಮತ್ತು ಬಳೆಗಳನ್ನು ಬಿಚ್ಚಿ ಆತನ ಕೈಗೆ ಕೊಟ್ಟು ಒಳಗೆ ಹೋಗಿದ್ದಾನೆ. ಒಳ ಹೋಗಿ ಹೊರ ಬರುಷ್ಟರಲ್ಲಿ ವಂಚಕ ಪರಾರಿಯಾಗಿದ್ದಾನೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋರ್ಟ್ ಹಾಲ್‌ ನಿಂದ ಹೊರ ಬಂದು ಆಟೋದಲ್ಲಿ ಕುಳಿತಿದ್ದ ಹಿರಿಯ ಜೀವಗಳಿಗೆ ತೀರ್ಪು ಕೊಟ್ಟ ಜಡ್ಜ್..! ಏನಿದು ಪ್ರಕರಣ..?

ಪಾಕ್ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣ ಭಾರತದಲ್ಲಿ ಸ್ಥಗಿತ..! ಪಾಕ್ ನಟಿಯಿಂದ ಮೋದಿಗೆ ಮನವಿ..!

See also  ದೊಡ್ಡಡ್ಕ: ಅನಾರೋಗ್ಯದಿಂದ ವ್ಯಕ್ತಿ ಸಾವು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget