ಮಹಿಳೆ-ಆರೋಗ್ಯವೈರಲ್ ನ್ಯೂಸ್

ಮಗನ ಸಾವಿನಲ್ಲೂ ಅಂಧರ ಬಾಳಿಗೆ ಬೆಳಕು ತೋರಿದ ಪೋಷಕರು! ಅಷ್ಟಕ್ಕೂ ಮಗನ ಆಸೆ ಏನಾಗಿತ್ತು?

300

ನ್ಯೂಸ್ ನಾಟೌಟ್ : ಮಗ ಮೃತಪಟ್ಟ ನೋವಿನ ನಡುವೆಯೂ ಆತನ ಕಣ್ಣುಗಳನ್ನು ದಾನ ಮಾಡುವ ಮೂಲಕ ಪೋಷಕರು ಸಾರ್ಥಕತೆ ಮೆರೆದ ಘಟನೆ ಚಾಮರಾಜನಗರದ ಹನೂರು ತಾಲೂಕಿನ ಕುರಟ್ಟಿಹೊಸೂರು ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿಹೊಸೂರು ಗ್ರಾಮದಲ್ಲಿ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಪೋಷಕರು ಈತನ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ.

ಕುರಟ್ಟಿಹೊಸರು ಗ್ರಾಮದ ಅಂಬರೀಶ್ (27) ಎಂಬ ಯುವಕ ಬೈಕ್ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದನು, ತಕ್ಷಣ ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅಂಬರೀಶ್ ಮಂಗಳವಾರ (ಜುಲೈ 11) ನಿಧನ ಹೊಂದಿದ್ದು, ಈತನ ಕಣ್ಣುಗಳನ್ನು ‌ಪಾಲಕರ ಒಪ್ಪಿಗೆಯಂತೆ ದಾನ ಮಾಡಲಾಗಿದೆ. ತನ್ನ ಮರಣದ ಬಳಿಕ ನೇತ್ರದಾನ ಮಾಡಬೇಕು ಎಂಬುದು ಅಂಬರೀಶ್ ಅವರ ಆಸೆಯಾಗಿತ್ತು. ಅದರಂತೆಯೇ ಮಗನ ನೇತ್ರದಾನ ಮಾಡಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.

See also  Tiger Claw: ಹುಲಿ ಉಗುರಿನ ವಿಚಾರ ನಿಮ್ಮ ವ್ಯಾಪ್ತಿಗೆ ಬರಲ್ಲ, ನಾವು ನಿರ್ಧಾರ ಮಾಡ್ತೀವಿ ಎಂದ ಕೇಂದ್ರ ಸರ್ಕಾರ..! ಈ ಬಗ್ಗೆ ಅರಣ್ಯ ಸಚಿವ ಹೇಳಿದ್ದೇನು..? ಆದೇಶದ ಅವಧಿ ಮುಕ್ತಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget