Latestಕ್ರೈಂದಕ್ಷಿಣ ಕನ್ನಡ

ವಿಟ್ಲ: ‘ನೀನು ಚೆನ್ನಾಗಿದ್ದೀಯಾ.. ಗುಡ್ಡೆಗೆ ಬರುತ್ತೀಯಾ’  ಎಂದ ಮಾಲೀಕ!ಬಾಲಕಿ ಜತೆ ಅನುಚಿತ ವರ್ತನೆ ಮಾಡಿದಾತನ ವಿರುದ್ಧ ದೂರು ದಾಖಲು

851

ನ್ಯೂಸ್‌ ನಾಟೌಟ್: ಅಪ್ರಾಪ್ತೆ ವಯಸ್ಸಿನ(೧೫ ವರ್ಷ) ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿದ ಮಾಲೀಕನ ವಿರುದ್ಧ ಪೋಕ್ಸೋ ಪ್ರಕರಣ  ದಾಖಲಾಗಿದೆ. ಮಹೇಶ್ ಭಟ್ ಎನ್ನುವಾತನ ವಿರುದ್ಧ ದಕ್ಷಿಣ ಕನ್ನಡ  ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಜಾತಿನಿಂದನೆ ದೂರು ದಾಖಲಾಗಿದೆ.

ಏನಿದು ಘಟನೆ?

ಜನವರಿ 12ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಅಂದು ತಂದೆ ಕೆಲಸ ಮಾಡುವ ತೋಟಕ್ಕೆ ಬಾಲಕಿ ಸಹ ಹೋಗಿದ್ದಳು ಎನ್ನಲಾಗಿದೆ. ಆ ವೇಳೆ ತೋಟದ ಮಾಲೀಕ ಮಹೇಶ್ ಭಟ್ ಎಂಬಾತ ‘ನೀನು ಚೆನ್ನಾಗಿದ್ದಿಯಾ. ನಾನು ಇಷ್ಟ ಇದ್ದೀನಾ? ಗುಡ್ಡೆಗೆ ಬರ್ತೀಯಾ’ ಎಂದು ಬಾಲಕಿಗೆ ಕೇಳಿದ್ದಾನೆ. ಆದ್ರೆ, ಬಾಲಕಿ ಇದನ್ನು ನಿರಾಕರಿಸಿ ಮನೆಗೆ ಹೋಗಿದ್ದಾಳೆ. ಬಳಿಕ ತೋಟದ ಮಾಲೀಕ ಮಹೇಶ್ ಭಟ್​​ನ ಅನುಚಿತ ವರ್ತನೆ ಬಗ್ಗೆ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಪೋಷಕರು ಪೊಲೀಸ್ ಮೆಟ್ಟಿಲೇರಿ ದೂರು ನೀಡಿದ್ದಾರೆ.ಇದೀಗ ಈ ಸಂಬಂಧ ತೋಟದ ಮಾಲೀಕ ಮಹೇಶ್ ಭಟ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಜಾತಿನಿಂದನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

 

View this post on Instagram

 

A post shared by News not out (@newsnotout)

See also  ಸೋನಿಯಾ ಗಾಂಧಿಯನ್ನು ಭಾರತ ಮಾತೆಯಂತೆ ಚಿತ್ರಿಸಿದ್ದೇಕೆ ಕಾಂಗ್ರೆಸ್? ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget