ನ್ಯೂಸ್ ನಾಟೌಟ್: ವಿವಾಹಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ 8 ವರ್ಷಗಳಿಂದ ಇಡೀ ಕುಟುಂಬವನ್ನು ಅವರದ್ದೇ ಸಮಾಜದವರು ಬಹಿಷ್ಕರಿಸಿದ್ದಾರೆನ್ನಲಾದ ಘಟನೆ ಕೊಪ್ಪಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಹನುಮಂತಪ್ಪ ಮತ್ತು ಮಂಜುಳಾ ಹುಳ್ಳಿ ಎಂಬವರು 8 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇದನ್ನು ಖಂಡಿಸಿ, ಇವರ ಜೊತೆಗೆ ಇಡೀ ಕುಟುಂಬವನ್ನು ಬಹಿಷ್ಕರಿಸಲಾಗಿತ್ತು ಎಂದು ತಿಳಿದು ಬಂದಿದೆ.
ಹನುಮಂತಪ್ಪ ಮತ್ತು ಮಂಜುಳಾ ಹುಳ್ಳಿ ಎಂಬವರು ಪರಸ್ಪರ ಪ್ರೀತಿಸುತ್ತಿದ್ದರು. ಯುವತಿಯ ಮನೆಯವರು ಇವರಿಬ್ಬರ ಮದುವೆಗೆ ಒಪ್ಪಿರಲಿಲ್ಲ. ನಂತರ ಯುವತಿಯನ್ನು ಬೇರೊಬ್ಬರಿಗೆ ನೀಡಿ ಮದುವೆ ಮಾಡಲಾಯಿತು. ಆದರೆ ಮದುವೆಯಾಗಿ ಕೆಲದಿನಗಳ ನಂತರ ಯುವತಿ ತನ್ನ ಪತಿಯನ್ನು ತೊರೆದು ತಾನು ಪ್ರೀತಿಸಿದ್ದ ಹನುಮಂತಪ್ಪರನ್ನು ವಿವಾಹವಾಗಿದ್ದರು. ಈ ಕಾರಣದಿಂದ ಈ ಕುಟುಂಬವನ್ನು ಪರ್ವತ ಮಲ್ಲಯ್ಯ ಎಂಬ ಸಮಾಜ 8 ವರ್ಷದ ಹಿಂದೆ ಬಹಿಷ್ಕಾರ ಮಾಡಿತ್ತು ಎಂದು ಆರೋಪಿಸಲಾಗಿದೆ.
ಊರಿನಿಂದ ಊರಿಗೆ ಅಳೆಯುತಿದ್ದ, ಈ ಕುಟುಂಬ ಸದ್ಯ ಕೊಪ್ಪಳ ತಾಲೂಕಿನ ಚಿಲಕಮುಕ್ಕಿ ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ.
RSS ಕಚೇರಿ ಮೇಲಿನ ದಾಳಿಯ ಪ್ರಮುಖ ಆರೋಪಿ ಪಾಕ್ ನಲ್ಲಿ ನಿಗೂಢ ಹತ್ಯೆ..!ಅಪರಿಚಿತ ಗುಂಪಿಂದ ದಾಳಿ..!