Uncategorized

26 ವರ್ಷಕ್ಕೆ 21 ಮದುವೆಯಾದ ಪುಣ್ಯಾತ್ಮ, ಪೊಲೀಸರ ಲಾಠಿ ಬಿಸಿಗೆ ಮದುವೆ ಪುರಾಣ ಬಾಯ್ಬಿಟ್ಟ!

ನ್ಯೂಸ್ ನಾಟೌಟ್: ಕೆಲವರಿಗೆ ಎಷ್ಟು ಹುಡುಕಿದರೂ ಒಂದು ಹುಡುಗಿ ಸಿಗುವುದಿಲ್ಲ. ಇನ್ನೂ ಮದುವೆ ಆಗಿಲ್ಲವಲ್ಲ ಎಂಬ ಕೊರಗಿನಲ್ಲಿ ದೇಶದ ಅದೆಷ್ಟೋ ಯುವಕರು ಇದ್ದಾರೆ. ಆದರೆ ಇಲ್ಲೊಬ್ಬ ಪುಣ್ಯಾತ್ಮ ಒಂದಲ್ಲ ಎರಡಲ್ಲ ಬರೋಬ್ಬರಿ21 ಮದುವೆಯಾಗಿ ಸುದ್ದಿಯಾಗಿದ್ದಾನೆ. ಈತನ ಹೆಸರು ಕಾರ್ತಿಕ್, ವಯಸ್ಸು 26. ತಂಜಾವೂರಿನ ಕಾರ್ತಿಕ್ ಇಷ್ಟು ಸಣ್ಣ ವಯಸ್ಸಿಗೆ 21 ಮದುವೆಯಾಗಿ ಕುಖ್ಯಾತಿ ಪಡೆದಿದ್ದಾನೆ. ಸದ್ಯ ಈತನ ಸ್ಟೋರಿ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈತನಿಗೆ ಮದುವೆ ಎಂದರೆ ನೀರು ಕುಡಿದಷ್ಟೇ ಸಲೀಸು. ಮೊದಲ ಹೆಂಡತಿಗೆ ಯಾಮಾರಿಸಿದ ಬಳಿಕ ಈತ ನಿರಂತರವಾಗಿ ಮದುವೆಯಾಗುತ್ತಾ ಯಾಮಾರಿಸುತ್ತಾ ಸಾಗಿದ್ದಾನೆ. ಬರೋಬ್ಬರಿ ಚಿನ್ನ, ಹಣ ಲೂಟಿ ಮಾಡಿ ಒಂದೆರಡು ತಿಂಗಳು ಸಂಸಾರ ಮಾಡಿ ಬಳಿಕ ಎಸ್ಕೇಪ್ ಆಗುವುದು ಆತನ ಹವ್ಯಾಸ. ಇದೀಗ ಯುವತಿಯೊಬ್ಬಳನ್ನು ಮದುವೆಯಾಗಿ ಆಕೆಗೆ ಮೋಸ ಮಾಡಿದ್ದಾನೆ. ಆಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ದೂರಿನ ಪ್ರಕಾರ ತನಿಖೆ ಆರಂಭಿಸಿದ ಪೊಲೀಸರು ಇದೀಗ ಆತನನ್ನು ಹಿಡಿದಿದ್ದಾರೆ. ಪೊಲೀಸರ ಲಾಠಿ ಬಿಸಿ ಬೀಳುತ್ತಿದ್ದಂತೆ 21 ಮದುವೆಯ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

Related posts

ಲಿಫ್ಟ್ ನೊಳಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಒದ್ದು ಬುದ್ದಿ ಕಲಿಸಿದ ಮಹಿಳೆ..! ಇಲ್ಲಿದೆ ವೈರಲ್ ವಿಡಿಯೋ

ಪತ್ರಕರ್ತ ಹೇಮಂತ್ ಸಂಪಾಜೆಗೆ ‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ’ ರಾಜ್ಯ ಪ್ರಶಸ್ತಿ

ಮಡಪ್ಪಾಡಿ, ಮರ್ಕಂಜ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ!