Latestಕ್ರೈಂವೈರಲ್ ನ್ಯೂಸ್

ಪತ್ನಿಯನ್ನು ಕೊಂದು ಸೂಟ್‌ ಕೇಸ್‌ ನಲ್ಲಿ ತುಂಬಿದ್ದ ಪತಿ ಅರೆಸ್ಟ್..! ಬಾಡಿಗೆ ಮನೆಯಲ್ಲಿದ್ದವರ ಭೀಕರ ಕ್ರೈಂ ಕಹಾನಿ..!

905

ನ್ಯೂಸ್ ನಾಟೌಟ್ : ಗಂಡನಿಗೆ ಸಾಫ್ಟ್‌ವೇರ್‌ ಕೆಲಸ ಇತ್ತು. ಹೆಂಡತಿ ಕೂಡ ಡಿಗ್ರಿ ಮುಗಿಸಿ ಕೆಲಸಕ್ಕಾಗಿ ಹುಡುಕ್ತಿದ್ದರು . ಹೀಗಿದ್ದಾಗ ಹೆಂಡ್ತಿಯನ್ನ ಕೊಲೆ ಮಾಡಿ ಸೂಟ್ ಕೇಸ್‌ಗೆ ತುಂಬಿ ಪುಣೆಯಲ್ಲಿ ಅರೆಸ್ಟ್ ಆಗಿರೋ ಗಂಡನ ಕ್ರೈಂ ಕಹಾನಿ ಭೀಕರವಾಗಿದೆ.

ಗೌರಿ ಅನಿಲ್ ಸಾಂಬೇಕರ್ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ ಮಾಸ್ ಕಮ್ಯುನಿಕೇಷನ್‌ನಲ್ಲಿ ಡಿಗ್ರಿ ಮುಗಿಸಿದ್ರು, ಎರಡು ವರ್ಷದ ಹಿಂದೆ ರಾಕೇಶ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ರಾಕೇಶ್ ವರ್ಕ್ ಫ್ರಂ ಹೋಮ್‌ನಲ್ಲೇ ಕೆಲಸ ನಿರ್ವಹಿಸ್ತಿದ್ದ.

ಇಬ್ಬರೂ ಕೂಡ ಮಹಾರಾಷ್ಟ್ರ ಮೂಲದವರು. ಕಳೆದ ಒಂದು ತಿಂಗಳ ಹಿಂದೆ ಕರ್ನಾಟಕದ ಆನೆಕಲ್ ನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಇನ್ನು ಮಾ.27ರ ಸಂಜೆ ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿಗೆ ಕರೆ ಮಾಡಿ ಹೆಂಡತಿಯನ್ನು ಕೊಲೆ ಮಾಡಿ ಸೂಟ್‌ ಕೇಸ್‌ ನಲ್ಲಿಟ್ಟಿರೋದಾಗಿ ಹೇಳಿದ್ದ. ಕೆಳಗಿನ ಮನೆಯ ಬಾಡಿಗೆದಾರ ಕೂಡಲೇ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಎಫ್‌ಎಸ್‌ಎಲ್ ಟೀಂ, ಸೋಕೊ ಟೀಂ ಜೊತೆ ಎಂಟ್ರಿ ಕೊಟ್ಟ ಹುಳಿಮಾವು ಪೊಲೀಸರಿಗೆ ಕೊಲೆಯಾಗಿರೋದು ಖಚಿತವಾಗುತ್ತೆ.

ಹೆಂಡತಿಯ ದೇಹವನ್ನು ಅರ್ಧ ಕತ್ತರಿಸಿ, ಹೊಟ್ಟೆಭಾಗ ಕೊಯ್ದು ಸೂಟ್‌ ಕೇಸ್‌ನಲ್ಲಿ ತುರುಕಿ, ಟಾಯ್ಲೆಟ್ ರೂಂನಲ್ಲಿಟ್ಟು ಪತಿರಾಯ ಎಸ್ಕೇಪ್ ಆಗಿದ್ದ. ಮೊನ್ನೆ ರಾತ್ರಿ ಊಟದ ಸಮಯಕ್ಕೆ ಗಂಡ ಹೆಂಡತಿ ನಡುವೆ ಗಲಾಟೆಯಾಗಿದೆ. ಈ ವೇಳೆ ಹೆಂಡತಿಯನ್ನ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯ ಸಿಡಿಆರ್ ಜಾಡು ಹಿಡಿದ ಪೊಲೀಸರು ಪುಣೆಯ ಶಿರವಾಲ್ ಪೊಲೀಸರು ಬಂಧಿಸಿದ್ದಾರೆ.

ಸಚಿವರ ಹನಿಟ್ರ್ಯಾಪ್‌ ಕೇಸ್ ಗೆ ಹೊಸ ಟ್ವಿಸ್ಟ್..! ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂದು ಡಿಜಿಪಿಗೆ ದೂರು ಕೊಟ್ಟ ರಾಜಣ್ಣ ಪುತ್ರ..!

 

See also  16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ಬ್ಯಾನ್‌..? ಹೊಸ ಮಸೂದೆ ಅಂಗೀಕಾರ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget