ಕ್ರೈಂದೇಶ-ಪ್ರಪಂಚ

ಟ್ರಾಫಿಕ್‌ ನಡುವೆ ಬೆತ್ತಲಾಗಿ ಓಡಿದ ವಿದೇಶಿ ಪ್ರಜೆ..! ಗ್ರಾಮಸ್ಥರು ಮರಕ್ಕೆ ಕಟ್ಟಿ ಹಾಕಿದ್ದೇಕೆ?

ನ್ಯೂಸ್ ನಾಟೌಟ್: ಪೇಟೆಯ ನಡು ರಸ್ತೆಯಲ್ಲಿ ಬೆತ್ತಲಾಗಿ ಓಡಿದ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಗುರುಗ್ರಾಮ್‌ ನಲ್ಲಿ ಮಾರ್ಚ್ 15 ರಂದು ನಡೆದಿದೆ.

ಗುರುಗ್ರಾಮದ ಸೆಕ್ಟರ್ 69 ರಲ್ಲಿ ಟುಲಿಪ್ ಚೌಕ್ ಬಳಿಯ ರಸ್ತೆಯಲ್ಲಿ ಬುಧವಾರ ಸಂಜೆ 6 ಗಂಟೆಯ ವೇಳೆಗೆ ವ್ಯಕ್ತಿಯೊಬ್ಬ ಬೆತ್ತಲಾಗಿ ಓಡಿದ್ದಾನೆ. ಸಾರ್ವಜನಿಕರ ಮುಂದೆ, ಟ್ರಾಫಿಕ್‌ ನಡುವೆ ವ್ಯಕ್ತಿ ಬೆತ್ತಲಾಗಿ ಓಡಾಡಿದ್ದನ್ನು ನೋಡಿ ,ಭೀತಿಯಿಂದಲೇ ಜನ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಪೊಲೀಸರು ಬಂದದ್ದನ್ನು ನೋಡಿದ ಬಳಿಕ ವ್ಯಕ್ತಿ ಗ್ರಾಮದತ್ತ ಓಡಿ ಹೋಗಿದ್ದಾನೆ. ಗ್ರಾಮಸ್ಥರನ್ನು ಆತನನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ. ಆ ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನೈಜೀರಿಯನ್ ರಾಷ್ಟ್ರದ ಪ್ರಜೆಯಾಗಿರುವ ವ್ಯಕ್ತಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಮಾನಸಿಕ ಆರೋಗ್ಯ ಸರಿಯಾಗಿದ್ದರೆ, ಆತನ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಬಾದಶಹಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮದನ್ ಲಾಲ್ ಹೇಳಿದ್ದಾರೆ.

Related posts

ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮತ ಚಲಾಯಿಸಲು ಬಂದಾಗ ಹಿಂಸಾಚಾರ..! ಟಿಎಂಸಿ ಕಾರ್ಯಕರ್ತನಿಂದ ದಾಳಿ..! ಇಲ್ಲಿದೆ ವಿಡಿಯೋ

ಸಾಲದ ಸುಳಿಯಲ್ಲಿದ್ದ ಅಂಬಾನಿಗೆ 4,660 ಕೋಟಿ ರೂ. ಮೊತ್ತದ ಕಾನೂನು ಹೋರಾಟದಲ್ಲಿ ಜಯ

ಮುಸ್ಲಿಂ ವ್ಯಕ್ತಿಯ ಕನಸಲ್ಲಿ ಪ್ರತ್ಯಕ್ಷವಾದ ದೇವಿ,ದರ್ಗಾ ಪಕ್ಕದಲ್ಲೇ ದೇಗುಲ ನಿರ್ಮಿಸಿ ನಿತ್ಯ ಪೂಜೆ