ಕರಾವಳಿ

ಕಾರಿನಲ್ಲಿ ಮಲಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ನ್ಯೂಸ್ ನಾಟೌಟ್:ವ್ಯಕ್ತಿಯೋರ್ವರು ಕಾರಿನೊಳಗೆ ಕುಳಿತ ಸ್ಥಿತಿಯಲ್ಲಿ ಮೃತಪಟ್ಟ ಘಟನೆ ಕಲ್ಲಡ್ಕದಿಂದ ವರದಿಯಾಗಿದೆ.ಗೋಳ್ತಮಜಲು ಗ್ರಾಮದ ಹೊಸೈಮಾರ್‌ ನಿವಾಸಿ ಜಗದೀಶ್‌ ಮೃತ ವ್ಯಕ್ತಿ.

ಜಗದೀಶ್‌ ಎಂಬುವವರು ವೃತ್ತಿಯಲ್ಲಿ ಚಾಲಕನಾಗಿದ್ದು, ಕಳೆದ ಕೆಲವು ವರ್ಷಗಳ ಹಿಂದೆ ವಿಡಿಯೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದು, ನಿನ್ನೆ ಬೆಳಿಗ್ಗೆ ತರವಾಡು ಮನೆಯಲ್ಲಿ ದೈವದ ಕಾರ್ಯಕ್ಕೆ ಹೋಗಿದ್ದ ರು. ವಾಪಾಸು ಮನೆಗೆ ಬರುವ ವೇಳೆ ಕಲ್ಲಡ್ಕ ತಲುಪಿದಾಗ ಕಾರು ಚಲಾಯಿಸಲು ಕಷ್ಟವಾಗುತ್ತಿದೆ ನಾನು ಮತ್ತೆ ಬರುತ್ತೇನೆ ಎಂದು ಜತೆಗಿದ್ದ ಬಾವನ ಬಳಿ ಹೇಳಿದ್ದಾರೆ.

ಆದರೆ ರಾತ್ರಿಯಾದರೂ ಈತ ಮನೆಗೆ ಬಾರದ ಹಿನ್ನೆಲೆ ಮತ್ತೆ ಬಂದು ನೋಡಿದಾಗ ಕಾರಿನ ಸೀಟಿನಲ್ಲಿ ಕುಳಿತು ಮಲಗಿದ ಸ್ಥಿತಿಯಲ್ಲಿರುವುದು ಹೊರಗಿನಿಂದ ಕಂಡುಬಂದಿದೆ. ಕಾರಿನ ಗ್ಲಾಸ್‌ ಹಾಕಿ ಮಲಗಿದ್ದರಿಂದ ಕಾರಿನ ಡೋರ್‌ ಓಪನ್‌ ಮಾಡಿದಾಗ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಗಮನಕ್ಕೆ ಬಂದಿದ್ದು, ಸಾವಿಗೆ ನೈಜ ಕಾರಣ ತನಿಖೆಯ ನಂತರವಷ್ಟೇ ತಿಳಿದು ಬರಬೇಕಾಗಿದೆ.

Related posts

ಸುಳ್ಯ : ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ,ಮನೆಯಲ್ಲಿ ಯಾರೂ ಇಲ್ಲದ ವೇಳೆ ದುರಂತ

ಸುಳ್ಯ: ರಾತ್ರೋ ರಾತ್ರಿ ಕಸದ ಮೂಟೆಯನ್ನು ರಸ್ತೆಗೆಸೆದು ಎಸ್ಕೇಪ್..!,ಯಾರು ಈ ಕಿಡಿಗೇಡಿಗಳು?ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹ

ಶಿಕ್ಷಕಿ ಪಾಠ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು 14ರ ಬಾಲಕಿ ಸಾವು..! ಸಿಸಿಟಿವಿಯಲ್ಲಿ ದೃಶ್ಯ ಸೆರೆ..!