ಕರಾವಳಿಕ್ರೈಂಪುತ್ತೂರು

ನವಜಾತ ಶಿಶುವನ್ನು ನೋಡಲು ತೆರಳಿದ ತಂದೆ ಅಪಘಾತಕ್ಕೆ ಬಲಿ!

ನ್ಯೂಸ್ ನಾಟೌಟ್: ಹೆರಿಗೆಯಾದ ತನ್ನ ಪತ್ನಿ ಮತ್ತು ಮಗುವನ್ನು ನೋಡಲೆಂದು ತೆರಳಿದ ವ್ಯಕ್ತಿ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ಶುಕ್ರವಾರ ದೇರಳಕಟ್ಟೆಯಲ್ಲಿ ನಡೆದಿದೆ.

ಬುಡೋಳಿ ನಿವಾಸಿ ಮಮ್ಮುಂಞ ಎಂಬವರ ಪುತ್ರ ಫಾರೂಕ್ (35) ಮೃತಪಟ್ಟವರು. ಮಾ.12ರಂದು ಫಾರೂಕ್‌ ಅವರ ಪತ್ನಿಗೆ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಪತ್ನಿ ಮತ್ತು ನವಜಾತ ಶಿಶುವನ್ನು ನೋಡಲೆಂದು ಫಾರೂಕ್‌ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ದಾರಿ ಮಧ್ಯೆ ಅಪಘಾತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಸ್ಪಂದಿಸದೆ ಶುಕ್ರವಾರ (ಮಾ.17 ರಂದು) ಮೃತಪಟ್ಟಿದ್ದಾರೆ.

ಫಾರೂಕ್‌ ದಂಪತಿಗೆ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರೂ ಮಕ್ಕಳಾಗಿರಲಿಲ್ಲ. ಹತ್ತು ವರ್ಷದ ಬಳಿಕ ಜನಿಸಿದ ಮಗುವನ್ನು ನೋಡಲೆಂದು ಆಸ್ಪತ್ರೆಗೆ ಖುಷಿಯಲ್ಲಿ ತೆರಳಿದ ತಂದೆ ವಿಧಿಯಾಟಕ್ಕೆ ಬಲಿಯಾದದ್ದು ಮಾತ್ರ ದುರಂತ.

Related posts

ಹಿಮಪಾತಕ್ಕೆ ಸಿಲುಕಿ ಮೂವರು ಯೋಧರು ಬಲಿ

ಸುಳ್ಯ: ದೇಶವ್ಯಾಪ್ತಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆ

ಬಜರಂಗದಳ ನಿಷೇಧಿಸುವ ಪ್ರಸ್ತಾಪ ಕಾಂಗ್ರೆಸ್ ಮುಂದಿಲ್ಲ,ಉಡುಪಿಯಲ್ಲಿ ವೀರಪ್ಪ ಮೊಯ್ಲಿ ಸ್ಪಷ್ಟನೆ