ಕರಾವಳಿ

Nitin Gadkari: ದಾವೋದ್ ಹೆಸರಲ್ಲಿ ನಿತಿನ್ ಗಡ್ಕರಿಗೆ ಪುತ್ತೂರಿನ ವ್ಯಕ್ತಿ ಜೀವ ಬೆದರಿಕೆ

ನ್ಯೂಸ್ ನಾಟೌಟ್: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ವ್ಯಕ್ತಿಯೊಬ್ಬ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಡೆಯವನೆಂದು ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಕರೆ ಮಾಡಿದಾತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಜಯೇಶ್ ಕುಮಾರ್ ಎಂದು ಗುರುತಿಸಲಾಗಿದೆ.

ಜಯೇಶ್‌ ಕುಮಾರ್ ಪುತ್ತೂರಿನ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಪಟ್ಟಿದ್ದಾನೆ. ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇದ್ದಾನೆ. ಜೈಲಿನಲ್ಲಿದ್ದರೂ ಸುಮ್ಮನೆ ಕೂರದ ಈಗ ಅಲ್ಲಿಂದಲೇ ಗಣ್ಯರ ಮೊಬೈಲ್ ನಂಬರ್ ಪಡೆದುಕೊಂಡು ಅವರಿಗೆ ಜೀವ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದ. ಈ ಹಿಂದೆ ಎಡಿಜಿಪಿ ಅಲೋಕ್ ಕುಮಾರ್ ಗೂ ಇದೇ ರೀತಿಯ ಬೆದರಿಕೆ ಹಾಕಿದ್ದ. ಇದೀಗ ಜೈಲಿನಲ್ಲಿ ಅಕ್ರಮವಾಗಿ ಫೋನ್‌ ಬಳಸಿ ಜಯೇಶ್‌ ಕುಮಾರ್ ಈ ಕೃತ್ಯವನ್ನು ಎಸಗಿದ್ದಾನೆ. ನಾಗ್ಪುರ ಪೊಲೀಸರು ತನಿಖೆಗಾಗಿ ಬೆಳಗಾವಿಗೆ ತೆರಳಿದ್ದಾರೆ. ಆರೋಪಿಯನ್ನು ಪ್ರೊಡಕ್ಷನ್ ರಿಮಾಂಡ್‌ ನೀಡಲು ಕೇಳಿಕೊಂಡಿದ್ದೇವೆ ಎಂದು ನಾಗ್ಪುರ ಪೊಲೀಸ್ ಆಯುಕ್ತರು ಅಮಿತೇಶ್ ಕುಮಾರ್ ಹೇಳಿದ್ದಾರೆ. ‌

ಜಯೇಶ್‌ ಕುಮಾರ್‌ ಅಪರಾಧ ಹಿನ್ನೆಲೆಯಿಂದ ಜೈಲಿನಲ್ಲಿ ಇರುವ ವ್ಯಕ್ತಿ. ಅಂತಹ ವ್ಯಕ್ತಿಗೆ ಮೊಬೈಲ್ , ಡೈರಿ ನೀಡಿದವರು ಯಾರು ಅನ್ನುವುದು ನಿಗೂಢವಾಗಿದೆ. ಡೈರಿ ಸಿಕ್ಕಿದರೂ ಇದುವರೆಗೆ ಮೊಬೈಲ್ ಸಿಕ್ಕಿಲ್ಲ. ಮೊಬೈಲ್ ಪತ್ತೆಗೆ ಪೊಲೀಸರ ತನಿಖೆ ಮುಂದುವರಿದಿದೆ. ಡೈರಿಯಲ್ಲಿ ದೇಶದ ಗಣ್ಯರ ಮೊಬೈಲ್ ನಂಬರ್ ಗಳು ಇವೆ ಎಂದು ಹೇಳಲಾಗುತ್ತಿದೆ. ಜಯೇಶ್ ಸಚಿವರ ಕಚೇರಿಗೆ ಶನಿವಾರ ಬೆಳಿಗ್ಗೆ 11:25, 11:32 ಹಾಗೂ 12:30ಕ್ಕೆ ಮೂರು ಬಾರಿ ಕರೆ ಮಾಡಿ ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯನೆಂದು 100 ಕೋಟಿ ರೂ.ಗೆ ಬೇಡಿಕೆಯಿಟ್ಟದ್ದ. ಇದಾದ ಬಳಿಕ ಸಚಿವರ ನಿವಾಸದ ಸುತ್ತ ಭದ್ರತೆ ಹೆಚ್ಚಿಸಲಾಗಿತ್ತು. ‌

Related posts

ಸುಬ್ರಹ್ಮಣ್ಯದಲ್ಲಿ ಕಾಡನೆ ಪ್ರತ್ಯಕ್ಷ! ಸ್ಥಳೀಯರಲ್ಲಿ ಹೆಚ್ಚಿದ ಆತಂಕ!

ಮರಣೋತ್ತರ ಶೌರ್ಯ ಪ್ರಶಸ್ತಿ ಘೋಷಣೆಗೆ ಯು.ಟಿ.ಖಾದರ್ ಒತ್ತಾಯ ! ಕಡಬ ಆನೆ ದಾಳಿ ಪ್ರಕರಣ

ಸುಳ್ಯ ತಾಲೂಕು ತಹಶೀಲ್ದಾರ್ ಕು. ಅನಿತಾಲಕ್ಷ್ಮೀ ವರ್ಗಾವಣೆ